- Advertisement -
- Advertisement -


ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಈಗಾಗಲೇ ಬಿಜೆಪಿ ಪಾಳಯ 18 ವಾರ್ಡ್ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹೀಗಾಗಿ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಶಾಸಕ ಸಂಜೀವ ಮಠಂದೂರು ಅವರು ಇಂದು ವಿಟ್ಲ ಬಿಜೆಪಿ ಕಾರ್ಯಲಯದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.
ಈ ವೇಳೆ ಬಿಜೆಪಿ ನಾಯಕರು ಹಾಗೂ 18 ವಾರ್ಡ್’ಗಳ ಬಿಜೆಪಿ ಅಭ್ಯರ್ಥಿಗಳು ಉಪಸ್ಥಿತರಿದ್ದರು.



ಪ್ರಾಣಾಳಿಕೆಯ ಅಂಶಗಳು ಈ ರೀತಿ ಇವೆ:
- ವಿಟ್ಲ ನಗರದೊಳಗಿನ ಎಲ್ಲಾ ರಸ್ತೆಗಳಿಗೆ ಕಾಂಕ್ರೀಟೀಕರಣ ಮಾಡಲಾಗುವುದು.
- ದಿನದ 24 ಗಂಟೆಯೂ ಕುಡಿಯುವ ನೀರು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುವುದು.
(ಈ ಯೋಜನೆಗೆ ಈಗಾಗಲೇ ರೂ. 115 ಕೋಟಿ ಮಂಜೂರಾತಿಗೊ0ಡಿದೆ) - ಬಡವರಿಗೆ ನಿವೇಶನ ಹಾಗೂ ಮನೆಯನ್ನು ಒದಗಿಸಲು ಆದ್ಯತೆ ನೀಡಲಾಗುವುದು.
- ವಿಟ್ಲ ಪೇಟೆಯಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ರಿಂಗ್ ರಸ್ತೆ ನಿರ್ಮಾಣ ಹಾಗೂ ಪೇ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುವುದು.
- ನಗರದಲ್ಲಿ ತುಂಡು ನಿವೇಶನ ಮತ್ತು ಯೋಜನಾ ಪ್ರಾಧಿಕಾರವನ್ನು ಪುತ್ತೂರು ನಗರ ಪ್ರಾಧಿಕಾರದೊಂದಿಗೆ ಜೋಡಿಸಿ ಅವಳಿ ನಗರಗಳಿಗೆ ಒಂದೇ ಪ್ರಾಧಿಕಾರ ರಚನೆ ಮಾಡಲಾಗುವುದು.
- ವಿಟ್ಲ ಪಟ್ಟಣ ಪಂಚಾಯತಿಗೆ ಸುಸಜ್ಜಿತವಾದ ಆಡಳಿತ ಕಛೇರಿ ನಿರ್ಮಾಣ ಮತ್ತು ಒಂದೇ ಸೂರಿನಡಿಯಲ್ಲಿ ನಾಡಕಛೇರಿ, ಸಬ್ರಿಜಿಸ್ಟ್ರಾರ್ ಕಛೇರಿ, ಉಪಖಜಾನೆ, ಕಂದಾಯ ನಿರೀಕ್ಷಕರ ಕಛೇರಿ, ಗ್ರಾಮ ಕರಣಿಕರ ಕಛೇರಿ ಇವೇ ಮೊದಲಾದ ಕಛೇರಿಗಳನ್ನು ಒಳಗೊಂಡ0ತೆ ಆಡಳಿತ ಸೌಧ ನಿರ್ಮಾಣ
- ವಿಟ್ಲದಲ್ಲಿ ಸುಸಜ್ಜಿತವಾದ ಈಜುಕೊಳ, ಪುರಭವನ, ಉದ್ಯಾನವನಗಳನ್ನು ನಿರ್ಮಿಸಲಾಗುವುದು.
- ವಿಟ್ಲದ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಜನರಿಗೆ ಇನ್ನೂ ಉತ್ತಮವಾದ ಆರೋಗ್ಯ ಸೇವೆಯನ್ನು ಒದಗಿಸಲು ಪ್ರಯತ್ನಿಸಲಾಗುವುದು.
- ವಿಟ್ಲದಲ್ಲಿರುವ ಕ್ರೀಡಾಪಟುಗಳಿಗೆ ಅನುಕೂಲವಾಗುವ ದೃಷ್ಠಿಯಲ್ಲಿ ಒಂದು ಉತ್ತಮವಾದ ಕ್ರೀಡಾಂಗಣದ ರಚನೆ.
- ಸ್ವಚ್ಛತೆಗೆ ಇನ್ನೂ ಹೆಚ್ಚಿನ ಆದ್ಯತೆಯನ್ನು ನೀಡಿ ಪೇಟೆಯಲ್ಲಿರುವ ರಾಜಕಾಲುವೆಗಳ ನವೀಕರಣ ಹಾಗೂ ಸುಸಜ್ಜಿತವಾದ ಒಳಚರಂಡಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು.
- ವಿದ್ಯುತ್ ಬಳಕೆ ಹಾಗೂ ಇಂಧನ ಉಳಿತಾಯ ದೃಷ್ಠಿಯಿಂದ ಎಲ್.ಇ.ಡಿ. ಬಲ್ಬಗಳ ಬಳಕೆಗೆ ಆದ್ಯತೆ ನೀಡಲಾಗುವುದು.
- ವಿಟ್ಲವನ್ನು ತಾಲೂಕು ಕೇಂದ್ರವಾಗಿ ಪರಿವರ್ತಿಸುವ ಪ್ರಯತ್ನಗಳು ಈಗಾಗಲೇ ಆರಂಭವಾಗಿದ್ದು, ಈ ದಿಸೆಯಲ್ಲಿ ಇನ್ನೂ ಹೆಚ್ಚಿನ ಪ್ರಯತ್ನ ಮಾಡಲಾಗುವುದು.
ಕಳೆದ ಬಾರಿಯ ನಮ್ಮ ಪ್ರಣಾಳಿಕೆಯಲ್ಲಿ ಹೆಚ್ಚಿನವುಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಬಾರಿಯೂ ಕೂಡಾ ಬಿಜೆಪಿಯ ಎಲ್ಲಾ 18 ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಿಕೊಟ್ಟಲ್ಲಿ ವಿಟ್ಲವನ್ನು ಒಂದು ಸರ್ವಾಂಗ ಸುಂದರ ನಗರವನ್ನಾಗಿ ಪರಿವರ್ತಿಸಲಾಗುವುದು



- Advertisement -








