Sunday, May 5, 2024
spot_imgspot_img
spot_imgspot_img

ವಿಟ್ಲ: ಶ್ರೀ.ಕ್ಷೇ.ಧ.ಗ್ರಾ.ಯೋಜನೆ, ಬಿ ಸಿ ಟ್ರಸ್ಟ್‌(ರಿ) ವಿಟ್ಲ ಇದರ ಕಾರ್ಯಕ್ಷೇತ್ರ ವ್ಯಾಪ್ತಿಯ ಕೇಪು ವಲಯ ವತಿಯಿಂದ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಾರ್ಯಕ್ಷೇತ್ರ ವ್ಯಾಪ್ತಿಯ ಕೇಪು ವಲಯದ ಚೈತನ್ಯ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ. ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ರಾದ ದಯಾನಂದ ಎಸ್. ನಾಯಕ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕರಾದ ಸತ್ಯವತಿ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪಾಕ ಪ್ರವೀಣರಾದ ಸವಿತಾ ಎಸ್. ಭಟ್ ರವರು ಸಿರಿ ಧಾನ್ಯ ಬಳಕೆ ಯ ಬಗ್ಗೆ, ಇದರಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಸವಿ ವಿವಾರವಾದ ಮಾಹಿತಿ ನೀಡಿದರು.

ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ ಪ್ರಾಸ್ತಾವಿಕ ಮಾತನಾಡಿ, ಸೇವಾ ಪ್ರತಿನಿಧಿ ಗುಲಾಬಿ ವರದಿ ಮಂಡನೆ ಮಾಡಿದರು. ಪ್ರತಿಮಾ ಸ್ವಾಗತಿಸಿ ಸಂಯೋಜಕಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ಸದಸ್ಯರು ಮಾಡಿದ ವಿವಿಧ ರೀತಿಯ ಸಿರಿಧಾನ್ಯ ಆಹಾರ ಹಾಗೂ ಅದರ ಬಗ್ಗೆ ವಿವರಣೆ ನೀಡಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಕೇಂದ್ರದ ಸದಸ್ಯರು ಸ್ವ ರಚಿತ ಸಿರಿಧಾನ್ಯ ಸಂಬಂಧಿ ಹಾಡು ಹಾಗೂ ಕವನ ವಾಚನ ಮಾಡಿದರು. ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳು, ಯೋಜನೆಯ ಮಾಣಿಲ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.

- Advertisement -

Related news

error: Content is protected !!