ವಿಟ್ಲ: ಮೆಸ್ಕಾಂ ಅಧಿಕಾರಿ/ನೌಕರರ ಸಂಘ, ಕೆ.ಪಿ.ಟಿ.ಸಿ.ಎಲ್ ಹಾಗೂ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಪ್ರಾಥಮಿಕ ಸಮಿತಿ, ವಿಟ್ಲ ಮೆಸ್ಕಾಂ ಉಪವಿಭಾಗದ 9ನೇ ವರ್ಷದ ವಾರ್ಷಿಕ ದಸರಾ ಕ್ರೀಡಾಕೂಟವು ಸೆ.18 ಆದಿತ್ಯವಾರದಂದು ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 8-30ಕ್ಕೆ ನಡೆಯಲಿದೆ.

ಕ್ರೀಡಾಕೂಟದ ಉದ್ಘಾಟನೆಯನ್ನು ಬಂಟ್ವಾಳ ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ (ವಿ.) ಮೆಸ್ಕಾಂ, ಪ್ರಶಾಂತ್ ಪೈ ರವರು ನೆರವೇರಿಸಲಿದ್ದಾರೆ.
ಮೆಸ್ಕಾಂ ವಿಟ್ಲ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ್ ಜೋತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.

ಮುಖ್ಯ ಅತಿಥಿಗಳಾಗಿ ಚಂದ್ರಶೇಖರ್ ಲೆಕ್ಕಾಧಿಕಾರಿ ಮೆಸ್ಕಾಂ ವಿಭಾಗೀಯ ಕಛೇರಿ ಬಂಟ್ವಾಳ, ಲಕ್ಷ್ಮೀ ನಾರಾಯಣ ಅಡ್ಯಂತಾಯ ಅಧ್ಯಕ್ಷರು ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವಿಟ್ಲ ಉಪಸಮಿತಿ, ಶಂಕರ ಪ್ರಕಾಶ್ ಕೇಂದ್ರೀಯ ಸಮಿತಿ ಸದಸ್ಯರು ಕವಿಪನಿನಿ ನೌಕರರ ಸಂಘ (659) ಬಂಟ್ವಾಳ ವಿಭಾಗ, ದಿನೇಶ್ ಶಾಖಾಧಿಕಾರಿ (ವಿ.) ಮೆಸ್ಕಾಂ ಮಾಣಿ ಶಾಖೆ ಹಾಗೂ ಕೇಂದ್ರೀಯ ಸಮಿತಿ ಸದಸ್ಯರು ಪ.ಜಾ. ಪ.ವರ್ಗಗಳ ಕಲ್ಯಾಣ ಸಂಸ್ಥೆ (ರಿ.) ನಂ. 466 ಮೆಸ್ಕಾಂ ಬಂಟ್ವಾಳ ವಿಧಾಗ, ಬಾಲಕೃಷ್ಣ ಸೆರ್ಕಳ ಮೆಸ್ಕಾಂ ಪ್ರತಿನಿಧಿ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ದ.ಕ. ಜಿಲ್ಲೆ, ಕೃಷ್ಣ ಬನಾರಿ ಉಪಾಧ್ಯಕ್ಷರು, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ವಿಟ್ಲ ಉಪಸಮಿತಿ, ಪದ್ಮನಾಭ ಗೌಡ ಅಧ್ಯಕ್ಷರು, ಪ್ರಾಥಮಿಕ ಸಮಿತಿ (ಕವಿಪ್ರನ 659) ಮೆಸ್ಕಾಂ ವಿಟ್ಲ ಉಪವಿಭಾಗ, ಶ್ರೀಮತಿ ಗೀತಾ ಕಿರಿಯ ಇಂಜಿನಿಯರ್ (ವಿ.) – ಮೆಸ್ಕಾಂ ಮತ್ತೂರು ವಿಭಾಗ, ಅಕ್ಷಯ ಶೆಟ್ಟಿ ಮಾಪಕ ಓದುಗರ ಮೇಲ್ವಿಚಾರಕರು, ಮೆಸ್ಕಾಂ ವಿಟ್ಲ ಉಪವಿಭಾಗ ಭಾಗವಹಿಸಲಿದ್ದಾರೆ.
ಮೆಸ್ಕಾಂ ವಿಟ್ಲ ಉಪವಿಭಾಗ ತಂಡ ಹಾಗೂ ವಿಟ್ಲ ಪೊಲೀಸ್ ಠಾಣೆಯ ತಂಡದ ಸದಸ್ಯರ ಮಧ್ಯೆ ಸೌಹಾರ್ಧ ಪ್ರದರ್ಶನ ಕ್ರಿಕೆಟ್ ಪಂದ್ಯ ನಡೆಯಲಿರುವುದು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವಿಟ್ಲ ಉಪಸಮಿತಿಯ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಅಡ್ಯಂತಾಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದೇವದಾಸ್ ಕೊಟ್ಟಾರಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, (ಎ.) ನೆಟ್ಟ ಮತ್ತೂರುಹಾಗೂ ವಿಟ್ಲ ಕ.ವಿ.ಪ್ರ.ನ.. ವಿದ್ಯುತ್ ಉಪಕೇಂದ್ರಶ್ರೀ ರವಿಚಂದ್ರ ಸಹಾಯಕ (ಆಂತರಿಕ ಪರಿಶೋಧನೆ) ಮೆಸ್ಕಾಂ ಮಂಗಳೂರು ವೃತ್ತ ಅತ್ತಾವರ, ಸತೀಶ್ ಸಪಲ್ಯ ಸಹಾಯಕ ಇಂಜಿನಿಯರ್ (ವಿ.) ಮೆಸ್ಕಾಂ ವಿಟ್ಲ ಶಾಖೆ, ಜೆ. ನೆಲ್ಸನ್ ನವೀನ್ ಕುಮಾ ಸಹಾಯಕ ಲೆಕ್ಕಾಧಿಕಾರಿ, ಮೆಸ್ಕಾಂ ವಿಟ್ಲ ಉಪವಿಭಾಗಶ್ರೀ ಈರಣ್ಣ ಗೌಡಸಹಾಯಕ ಇಂಜಿನಿಯರ್, (ವಿ.) (ತಾಂತ್ರಿಕ) ಮೆಸ್ಕಾಂ ವಿಟ್ಲ ಉಪವಿಭಾಗಶ್ರೀ ಪ್ರಸಾದ್ ಕಿರಿಯ ಇಂಜಿನಿಯರ್, ಕ.ವಿ.ಪ್ರ.ನಿ.ನ. ವಿಟ್ಲ, ಆನಂದ್ ಎಂ.ಶಾಖಾಧಿಕಾರಿ (ಎ.) ಮೆಸ್ಕಾಂ ಉಕ್ಕುಡ ಶಾಖೆ, ಪಿ.ಜೆ. ಜಾನ್‌ಸನ್ M/s. ಶೀಬಾ ಇಲೆಕ್ಟಿಕಲ್ಸ್ ವಿಟ್ಲ, ವಿದ್ಯುತ್ ಗುತ್ತಿಗೆದಾರರು ವಿಟ್ಲ ಉಪಸಮಿತಿ,ಸತಿಶ್ ಶಾಖಾಧಿಕಾರಿ ಮೆಸ್ಕಾಂ (ವಿ.) ಕನ್ಯಾನ ಶಾಖೆ, ಪ್ರಸನ್ನ ಶಾಖಾಧಿಕಾರಿ ಮೆಸ್ಕಾಂ (ವಿ.) ಸಾಲೆತ್ತೂರು ಶಾಖೆ, ಬಾಬು ಮೂಲ್ಯವಿದ್ಯುತ್ ಗುತ್ತಿಗೆದಾರರು, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ವಿಟ್ಲ ಉಪವಿಭಾಗ ಇವರುಗಳು ಭಾಗವಹಿಸಲಿದ್ದಾರೆ.
ಶ್ರೀ ಪಿ. ಪದ್ಮನಾಭ (ದಿನೇಶ್ )ಇವರು ಮೆಸ್ಕಾಂ ವಿಟ್ಲ ಉಪವಿಭಾಗ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ವಿದ್ಯುತ್ ಲೈನ್ ಕಾಮಗಾರಿಯಲ್ಲಿ ತಮ್ಮ ತಂಡವನ್ನು ತೊಡಗಿಸಿಕೊಂಡಿದ್ದು, ಇವರ ಸೇವೆಯನ್ನು ಪರಿಗಣಿಸಿ, ಈ ಸಂದರ್ಭದಲ್ಲಿ ಸನ್ಮಾನಿಸಲಿದ್ದಾರೆ.
ಈ ಬಾರಿಯ ಕ್ರೀಡಾಕೂಟದಲ್ಲಿ ಮೆಸ್ಕಾಂ ಅಧಿಕಾರಿ / ನೌಕರರ ಹಾಗೂ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರ ಮಹಿಳಾ ಸದಸ್ಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಲ್ಲಾ ಶಾಖಾಧಿಕಾರಿಗಳು / ನೌಕರರರು ಮೆಸ್ಕಾಂ ಉಪವಿಭಾಗ, ವಿಟ್ಲ ಅಧಿಕಾರಿ / ನೌಕರರು ಕವಿಪ್ರನಿನಿ 110/11 ಕೆವಿ ವಿದ್ಯುತ್ ಉಪಕೇಂದ್ರ, ವಿಟ್ಲಅಧ್ಯಕ್ಷರು ಹಾಗೂ ಸರ್ವಸದಸ್ಯರು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವಿಟ್ಲ ಉಪಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








