Friday, March 29, 2024
spot_imgspot_img
spot_imgspot_img

ವಿಟ್ಲ: 2021ರ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಉತ್ತಮ ಸಾಧನೆಗೈದ ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಯಲ್ಲಿ ಕಲಿತ ಮೂವರು ವಿದ್ಯಾರ್ಥಿಗಳು

- Advertisement -G L Acharya panikkar
- Advertisement -

ವಿಟ್ಲ: ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಯಲ್ಲಿ ಕಲಿತ ಮೂವರು ವಿದ್ಯಾರ್ಥಿಗಳು 2021ರ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ.

ಹೊಸದುರ್ಗ ತಾಲೂಕಿನ ನಾಗರಕಟ್ಟೆ ನಿವಾಸಿ ಜಯಣ್ಣ ಹಾಗೂ ಪಂಕಜಾ ದಂಪತಿಗಳ ಪುತ್ರ ಡಾ. ಬೆನಕ ಪ್ರಸಾದ್ 92ನೇ ಸ್ಥಾನ ಪಡೆದಿದ್ದು, 2007ರಿಂದ 2010ರವರೆಗೆ ಪ್ರೌಢ ಶಿಕ್ಷಣವನ್ನು ಅಳಿಕೆಯಲ್ಲಿ ಪೂರೈಸಿದ್ದರು.

ದಾವಣಗೆರೆ ನಿವಾಸಿ ಬಸವ ರಾಜ್ ಪಾಟೀಲ್ ಹಾಗೂ ಅನ್ನಪೂರ್ಣ ದಂಪತಿಗಳ ಪುತ್ರ ನಿಖಿಲ್ ಬಿ.ಪಾಟೀಲ್. ಅವರು 139ನೇ ಸ್ಥಾನ ಪಡೆದಿದ್ದು, 2008ರಿಂದ 2013ವರೆಗೆ 8ನೇ ತರಗತಿಯಿಂದ ಪಿಯುಸಿ ವರೆಗೆ ಅಳಿಕೆ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದರು.

ಬೀದರ್ ಮೂಲದ ಡಾ. ವಿನಯ ಕುಮಾರ್ ಗಡ್ಗೆ 151ನೇ ಸ್ಥಾನಗಳಿಸಿದ್ದು, 2008ರಿಂದ 2010ರವರೆಗೆ ಪಿಯುಸಿ ಶಿಕ್ಷಣವನ್ನು ಅಳಿಕೆಯಲ್ಲಿ ಪೂರೈಸಿದ್ದಾರೆ.

- Advertisement -

Related news

error: Content is protected !!