
ವಿಟ್ಲ: ಕುಲಾಲ ಸಂಘ (ರಿ.) ಆಶ್ರಯದಲ್ಲಿ ಸಂಘದ ಮಹಿಳಾ ಘಟಕದ ಸಹಭಾಗಿತ್ವದೊಂದಿಗೆ 27ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕೋತ್ಸವವು 28/12/2025ನೇ ಆದಿತ್ಯವಾರ ಕುಲಾಲ ರಜತ ಭವನ, ಸಮುದಾಯ ಆರೋಗ್ಯ ಕೇಂದ್ರದ ಬಳಿ ವಿಟ್ಲ ಇಲ್ಲಿ ನಡೆಯಲಿದೆ.

ದಿನಾಂಕ 28-12-2025ನೇ ಆದಿತ್ಯವಾರ ಬೆಳಿಗ್ಗೆ 7.30ಕ್ಕೆ ಗಣಹೋಮ ನಡೆದು 9.00ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಆರಂಭವಾಗಲಿದೆ. ಬಳಿಕ 9.30ಕ್ಕೆ ಭಜನೆ, 10.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. 11.00ಕ್ಕೆ ಸಭಾ ಕಾರ್ಯಕ್ರಮ ನಡೆದು ಮಧ್ಯಾಹ್ನ 12.00ಕ್ಕೆ ಪ್ರತಿಭಾ ಪುರಸ್ಕಾರ ಬಳಿಕ ಮಧ್ಯಾಹ್ನ 1.00ಕ್ಕೆ ಅನ್ನಸಂತರ್ಪಣೆ ನಡೆದು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 11:00ಕ್ಕೆ ಪರಮಪೂಜ್ಯ ಶ್ರೀ ಮೊಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ ರ್ಶರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಮಾಣಿಲಿವರ ಇವರ ಆಶೀರ್ವಾದದೊಂದಿಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಟ್ಲ ಕುಲಾಲ ಸಂಘ (ರಿ.) ಅಧ್ಯಕ್ಷ ಬಿ.ಕೆ ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್ ಕೆ.ಎಂ.ಎ.ಎಸ್ ಮುಖ್ಯಾಧಿಕಾರಿ ಕರುಣಾಕರ ಬಿ, ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕಿ ಶಶಿಕಲಾ ಕೆ, ಎ.ಸಿ.ಡಿ.ಸಿ.ಸಿ ಬ್ಯಾಂಕ್ ಲಿ. ನಿವೃತ್ತ ವ್ಯವಸ್ಥಾಪಕಿ ರೋಹಿಣಿ ಬಿ. ಅತಿಥಿಗಳಾಗಿ ಉಪಸ್ಥಿತರಿರುವರು. ವಿಟ್ಲ ಕುಲಾಲ ಮಹಿಳಾ ಘಟಕ ಅಧ್ಯಕ್ಷೆ ವಾರಿಜಾ ಬಾಬು ಮೂಲ್ಯ ಮಾರ್ನೆಮುಗುಡ್ಡೆ ಉಪಸ್ಥಿತರಿರುವರು.










