Monday, November 2, 2026
spot_imgspot_img
spot_imgspot_img

ವಿಶೇಷಚೇತನ ಯುವತಿ ಮೇಲೆ ಸಾಮೂಹಿತ ಅತ್ಯಾಚಾರ; ಓರ್ವ ಅಂದರ್

- Advertisement -
- Advertisement -

ಹದಿನೆಂಟು ವರ್ಷದ ವಿಶೇಷಚೇತನ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಹಾನಗಲ್ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಯುವತಿಯ ಬಾಯಿಗೆ ಬಟ್ಟೆ ತುರುಕಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಗಳು ಪರಶುರಾಮ ಮಡಿವಾಳರ ಮತ್ತು ಯಶವಂತ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಪರಶುರಾಮ ಮಡಿವಾಳನನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಪರಾರಿಯಾಗಿರುವ ಆರೋಪಿ ಯಶವಂತಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ವಿಶೇಷಚೇತನ ಯುವತಿ ಮೇಲೆ ಅತ್ಯಾಚಾರ ಮಾಡಲು ಪರಶುರಾಮಗೆ ಯಶವಂತ ಸಹಕಾರ ನೀಡಿದ್ದಾನೆ ಎನ್ನಲಾಗಿದೆ. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

- Advertisement -

Related news

error: Content is protected !!