Monday, April 29, 2024
spot_imgspot_img
spot_imgspot_img

ಶೀಘ್ರದಲ್ಲೇ ಕೋವಿಶೀಲ್ಡ್​, ಕೋವ್ಯಾಕ್ಸಿನ್ ಲಸಿಕೆ ಮೆಡಿಕಲ್​​ಗಳಲ್ಲಿ ಲಭ್ಯ

- Advertisement -G L Acharya panikkar
- Advertisement -
suvarna gold

ನವದೆಹಲಿ: ಕೊರೊನಾ ಮಹಾಮಾರಿ ವಿರುದ್ಧ ಏಕೈಕ ಸಂಜೀವಿನಿ, ವೈರಸ್ ವಿರುದ್ಧದ ಸಮರದಲ್ಲಿ ಪರಿಣಾಮಕಾರಿ ಆಯುಧ ಅಂದ್ರೆ ವ್ಯಾಕ್ಸಿನ್ ಮಾತ್ರ. ಕೊರೊನಾ ವಿರುದ್ಧ ಹೋರಾಟಕ್ಕೆ ಜಗತ್ತಿನಾದ್ಯಂತ ಲಸಿಕೆಗಳೇ ರಾಮಬಾಣವಾಗಿದೆ. ಭಾರತದಲ್ಲೂ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಯನ್ನು ಸರ್ಕಾರದ ವತಿಯಿಂದ ಜನರಿಗೆ ಉಚಿತವಾಗಿ ನೀಡಲಾಗ್ತಿದೆ.

ಆದರೆ ಕೊರೊನಾ ವೈರಸ್ ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಾ, ರಕ್ತ ಬೀಜಾಸುರನಂತೆ ವಿವಿಧ ರೂಪದಲ್ಲಿ ಅವತಾರ ತಾಳೋ ಮೂಲಕ ವ್ಯಾಕ್ಸಿನೇಷನ್​ಗೂ ಸವಾಲೊಡ್ಡುತ್ತಿದೆ. ಕೊರೊನಾ ರೂಪಾಂತರಿ ಒಮಿಕ್ರಾನ್ ಸ್ಫೋಟಗೊಳ್ತಿದ್ದಂತೆ ಬೂಸ್ಟರ್ ಡೋಸ್ ನೀಡೋದಕ್ಕೆ ಸರ್ಕಾರ ಶುರುಮಾಡಿದೆ.

vtv vitla
vtv vitla

ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಕೊರೊನಾ ವ್ಯಾಕ್ಸಿನ್
ಈ ನಡುವೆ ವ್ಯಾಕ್ಸಿನ್ ವಿಚಾರವಾಗಿ ಮತ್ತೊಂದು ಗುಡ್ ನ್ಯೂಸ್ ಹೊರಬಿದ್ದಿದೆ. ಕೊರೊನಾ ಮಟ್ಟಹಾಕಲು ಬಳಕೆಯಲ್ಲಿರೋ ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ ಮುಕ್ತ ಮಾರುಕಟ್ಟೆಯಲ್ಲಿ ಸಿಗುವ ದಿನ ದೂರವಿಲ್ಲ ಅನ್ನೋ ಸುಳಿವು ಸಿಕ್ಕಿದೆ. ದೇಶದ ಮಾರುಕಟ್ಟೆಯಲ್ಲಿ ಕೊವಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಯನ್ನು ಮುಕ್ತಗೊಳಿಸುವ ಕುರಿತು ಕೇಂದ್ರ ಔಷಧ ಪ್ರಾಧಿಕಾರದ ಪರಿಣಿತರ ಸಮಿತಿ ಶಿಫಾರಸು ಮಾಡಿದೆ. ದೇಶದಲ್ಲಿ ಕೊರೊನಾ ಲಸಿಕೆಗಳು ಸುಲಭವಾಗಿ ಸಿಗೋ ನಿಟ್ಟಿನಲ್ಲಿ ತಜ್ಞರ ಸಮಿತಿ ಶಿಫಾರಸು ಮಾಡಿದ್ದು, ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ ಮಾಡಿರೋ ಶಿಫಾರಸನ್ನ ಡಿಜಿಸಿಐಗೆ ಕಳುಹಿಸಿಕೊಡಲಾಗಿದೆ.

ಮೆಡಿಕಲ್​ಗಳಲ್ಲೂ ಸಿಗುತ್ತಾ ಲಸಿಕೆ..?
ಕಳೆದ ಡಿಸೆಂಬರ್ 31ರಂದು ಕೊವಿಶೀಲ್ಡ್ ತಯಾರಿಸೋ ಪುಣೆ ಮೂಲದ ಸೀರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸುವ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಗಳು ಮುಕ್ತ ಮಾರುಕಟ್ಟೆಗೆ ಲಸಿಕೆ ಬಿಡುಗಡೆ ಮಾಡಲು ಅವಕಾಶ ಕೋರಿತ್ತು. ಈ ಮನವಿಯನ್ನು ಸ್ವೀಕರಿಸಿದ್ದ ಡಿಜಿಸಿಐಯ ಸಬ್ಜೆಕ್ಟ್ ಎಕ್ಸ್​​ಪರ್ಟ್ಸ್ ಕಮಿಟಿಯು ಲಸಿಕೆಯ ಸಾಮರ್ಥ್ಯ ಹಾಗೂ ಸುರಕ್ಷತೆ ಬಗ್ಗೆ ಮಾಹಿತಿ ನೀಡಬೇಕು ಅಂತಾ ಕೇಳಿತ್ತು. ಇದ್ರ ಬೆನ್ನಲ್ಲೇ ನಿನ್ನೆ ಎಸ್​ಇಸಿ ಎರಡೂ ಲಸಿಕೆಗಳ ಮುಕ್ತ ಮಾರುಕಟ್ಟೆಗೆ ಬಿಡೋ ಬಗ್ಗೆ ಶಿಫಾರಸು ಮಾಡಿದೆ.

ಒಟ್ನಲ್ಲಿ ಸರ್ಕಾರದ ವತಿಯಿಂದ ಅಥವಾ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಲಭ್ಯವಿರುವ ಕೊವಿಡ್ ಲಸಿಕೆ ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಮೆಡಿಕಲ್​ಗಳಲ್ಲೂ ಸಿಗೋದು ಬಹುತೇಕ ಪಕ್ಕಾ ಆಗಿದೆ. ಕೊರೊನಾ ಎಷ್ಟೇ ರೂಪಾಂತರಗೊಂಡರೂ ತಜ್ಞ ವೈದ್ಯರ ಸಲಹೆಯಂತೆ ಮೆಡಿಕಲ್​ಗಳಿಂದಲೇ ಲಸಿಕೆ ಪಡೆದುಕೊಳ್ಳೋ ಮುಕ್ತ ಅವಕಾಶ ಶೀಘ್ರದಲ್ಲೇ ಸಿಗುವ ಸಾಧ್ಯತೆ ಇದೆ.

vtv vitla
vtv vitla
- Advertisement -

Related news

error: Content is protected !!