- Advertisement -
- Advertisement -


ಕಾರವಾರ: ಗುಂಡು ಹಾರಿಸಿ ತಾಯಿ ಮತ್ತು ತಂಗಿಯನ್ನು ಯುವಕ ಹತ್ಯೆ ಮಾಡಿರುವ ಘಟನೆ ದೊಡ್ಡಮನೆ ಗ್ರಾಮದ ಕುರುಗೋಡು ಬಳಿ ನಡೆದಿದೆ. ಸಾಂಬಾರು ಸರಿಯಾಗಿ ಮಾಡಿಲ್ಲವೆಂದು ಮದ್ಯದ ನಶೆಯಲ್ಲಿ ಇಂತಹ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿ ಮಂಜುನಾಥ ಎನ್ನಲಾಗಿದೆ. ಮೃತರನ್ನು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕುರುಗೋಡು ನಿವಾಸಿ ಪಾರ್ವತಿ ನಾರಾಯಣ ಹಸ್ಲರ್, ರಮ್ಯಾ ನಾರಾಯಣ ಎಂದು ಗುರುತಿಸಲಾಗಿದೆ. ತಾಯಿ ಮತ್ತು ತಂಗಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದು ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆನ್ನಲಾಗಿದೆ.

- Advertisement -








