Sunday, June 21, 2026
spot_imgspot_img
spot_imgspot_img

ಸುಳ್ಯ: ಪಾದಾಚಾರಿ ಮಹಿಳೆಗೆ ದ್ವಿಚಕ್ರ ವಾಹನ ಡಿಕ್ಕಿ; ಮಹಿಳೆಗೆ ಗಾಯ

- Advertisement -
- Advertisement -

ಸುಳ್ಯ: ಪಾದಾಚಾರಿ ಮಹಿಳೆಗೆ ದ್ವಿಚಕ್ರ ವಾಹನ ಡಿಕ್ಕಿಯಾದ ಘಟನೆ ಡಿ.೨೨ರಂದು ಅಡ್ಕಾರು ಸಮೀಪ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಮಹಿಳೆ ಅಡ್ಕಾರು ನಿವಾಸಿ ಶಕುಂತಲಾ ಎನ್ನಲಾಗಿದೆ.

ಪೆರ್ಲಂಪಾಡಿ ನಿವಾಸಿ ಪವನ್ ಎಂಬುವವರು ಮಡಿಕೇರಿಯಲ್ಲಿ ಕೆಲಸ ಮುಗಿಸಿ ಪೆರ್ಲಂಪಾಡಿಯಲ್ಲಿರುವ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಶಕುಂತಲಾರವರು ಇಂದು ಬೆಳಿಗ್ಗೆ ಸ್ಥಳೀಯವಾಗಿ ನಡೆಯುತ್ತಿದ್ದ ಮೀಟಿಂಗ್ ನಲ್ಲಿ ಭಾಗವಹಿಸಿ ಬರುತ್ತಿದ್ದ ವೇಳೆ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ. ತಕ್ಷಣವೇ ಅವರನ್ನು ಸ್ಥಳೀಯರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!