Saturday, July 25, 2026
spot_imgspot_img
spot_imgspot_img

ಬಂಟ್ವಾಳ: ಗ್ಯಾಸ್ ಟ್ಯಾಂಕರ್’ಗೆ ಟೆಂಪೋ ಡಿಕ್ಕಿ…!

- Advertisement -
- Advertisement -

ಬಂಟ್ವಾಳ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುದ್ರೆಬೆಟ್ಟು ಎಂಬಲ್ಲಿ ಮಂಗಳವಾರ ಸಂಜೆ ಖಾಸಗಿ ಸಂಸ್ಥೆಗೆ ಸೇರಿದ ಟೆಂಪೋ ವಾಹನವೊಂದು ಅನಿಲ ಸಾಗಾಟದ ಟ್ಯಾಂಕರ್ ವಾಹನಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದ ಘಟನೆ ನಡೆದಿದೆ.

ಕಲ್ಲಡ್ಕ ಪ್ರೈ ಓವರ್ ಮೇಲೆ ಅತಿ ವೇಗದಿಂದ ಬಂದ ಟೆಂಪೋ ವಾಹನ ಸಮುದ್ರ ಹೊಟೇಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಗೆ ಹಿಂದಿನಿಂದ ಢಿಕ್ಕಿಯಾದ ಪರಿಣಾಮ ಚಾಲಕನ ಕೈ ವಾಹನಗಳ ನಡುವೆ ಸಿಲುಕಿಕೊಂಡಿತ್ತು.

ಗ್ಯಾಸ್ ಟ್ಯಾಂಕರ್ ಗೆ ವಾಹನ ಢಿಕ್ಕಿಯಾಗಿದ್ದರಿಂದ, ಅನಿಲ ಸೋರಿಕೆಯ ಭಯದಿಂದ ಯಾರೂ ವಾಹನಗಳ ಮೇಲೆ ಒತ್ತಡ ಹಾಕಿಲ್ಲ. ಸುದ್ದಿ ತಿಳಿದ 112 ಪೊಲೀಸ್ ವಾಹನದ ಸಿಬ್ಬಂದಿ ಸ್ಥಳಕ್ಕೆ ಬಂದು ಸ್ಥಳೀಯರ ನೆರವಿನೊಂದಿಗೆ ಚಾಲಕನನ್ನು ಹೊರತರುವಲ್ಲಿ ಯಶಸ್ವಿಯಾದರು. ಈ ವೇಳೆ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಹಾರ ಕಾರ್ಯಾಚರಣೆಗೆ ನೆರವಾದರು.

- Advertisement -

Related news

error: Content is protected !!