Sunday, May 5, 2024
spot_imgspot_img
spot_imgspot_img

ಸೋಡಿಯಂ ಕೊರತೆಯಿದ್ದಲ್ಲಿ ಈ ಆಹಾರಗಳನ್ನು ಸೇವಿಸಿ

- Advertisement -G L Acharya panikkar
- Advertisement -

ಉಪ್ಪಿನಲ್ಲಿ ಸೋಡಿಯಂ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದರಿಂದ, ಉಪ್ಪು ಹಾಗೂ ಉಪ್ಪಿನಾಂಶ ಇರುವ ಆಹಾರಗಳನ್ನು ಹೆಚ್ಚಾಗಿ ತಿನ್ನಬಾರದು ಎನ್ನುತ್ತಾರೆ. ಆದರೆ ಸೋಡಿಯಂ ಅಂಶದ ಕೊರತೆ ಕೂಡ ದೇಹಕ್ಕೆ ಉಂಟಾಗಬಾರದು. ಇದಕ್ಕಾಗಿ ನೈಸರ್ಗಿಕವಾಗಿ ಸಿಗುವ ತರಕಾರಿ ಗಳು, ಹಸಿರೆಲೆ ಸೊಪ್ಪುಗಳನ್ನು ಸೇವಿಸಿದರೆ, ಸೋಡಿಯಂ ಅಂಶದ ಕೊರತೆ ಆಗದಂತೆ ನೋಡಿಕೊಳ್ಳಬಹುದು.

ನಾವು ಹಿಂದಿನ ಲೇಖನದಲ್ಲಿ ಹಲವು ಬಾರಿ ಹೇಳುತ್ತಾ ಬಂದಿದ್ದೇವೆ, ಅಧಿಕ ಪ್ರಮಾಣದ ಸೋಡಿಯಂ ಅಂಶ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು. ಇದು ನಿಜ ಕೂಡ, ಹಾಗೆಂದು ಸೋಡಿಯಂ ಅಂಶಕ್ಕೆ ಎಂದಿಗೂ ಕೊರತೆ ಕೂಡ ತಂದು ಕೊಳ್ಳಬಾರದು! ಹೌದು, ಸೋಡಿಯಂ ಅಂಶದ ಕೊರತೆ ಉಂಟಾದರೆ ಕೂಡ ಆರೋಗ್ಯದಲ್ಲಿ ಇನ್ನಿತರ ಸಮಸ್ಯೆಗಳು ಕಂಡುಬರಲು ಶುರುವಾಗುತ್ತದೆ.

ಹೀಗಾಗಿ ಆರೋಗ್ಯ ತಜ್ಞರೇ ಹೇಳುವ ಪ್ರಕಾರ, ಅಡುಗೆಯಲ್ಲಿ ರುಚಿಗೆ ತಕ್ಕಷ್ಟು ಮಾತ್ರ ಉಪ್ಪನ್ನು ಬಳಸಿ ಕೊಂಡು, ನೈಸರ್ಗಿಕವಾಗಿ ದೊರೆಯುವ ಅಂದರೆ ಹಣ್ಣು-ತರಕಾರಿಗಳು, ಉದಾಹರಣೆಗೆ ಪಾಲಕ್ ಸೊಪ್ಪು, ತರಕಾರಿಗಳಾದ ಬೀಟ್ರೂಟ್, ಕ್ಯಾರೆಟ್ ಹಾಗೂ ಹಾಲಿನ ಉಪಉತ್ಪನ್ನವಾದ ಮೊದರು-ಮಜ್ಜಿಗೆ, ಇಲ್ಲಾಂದರೆ, ಧಾನ್ಯಗಳು, ಮೊಳಕೆ ಕಾಳುಗಳನ್ನು, ಆಹಾರಕ್ರಮದಲ್ಲಿ ಸೇರಿಸಿ ಕೊಂಡು ಹೋದರೆ, ನೈಸರ್ಗಿಕವಾಗಿ ಸೋಡಿಯಂ ಅಂಶ ನಮ್ಮ ಆರೋಗ್ಯಕ್ಕೆ ಸಿಕ್ಕಂತೆ ಆಗುತ್ತದೆ.

ನೆನಪಿಡಿ, ಅತಿಯಾಗಿ ಉಪ್ಪಿನಕಾಯಿ, ಉಪ್ಪಿನಾಂಶ ಇರುವ ಚಿಪ್ಸ್, ಸಾಸ್, ಉಪ್ಪಿನೊಂದಿಗೆ ಹುರಿದ ಅಹಾರ ಪದಾರ್ಥಗಳು, ಉಪ್ಪಿನ ಬಿಸ್ಕತ್‌ಗಳು ಅಥವಾ ಪ್ಯಾಕೆಟ್‌ನಲ್ಲಿ ಸಿಗುವ ಇತರ ಸ್ನ್ಯಾಕ್ಸ್, ಸಿದ್ಧ ಪಡಿಸಿರುವ ಆಹಾರ ಪದಾರ್ಥಗಳು, ಇವುಗಳಲ್ಲಿ ಉಪ್ಪಿನಾಂಶ ಹೆಚ್ಚಾಗಿರುವುದರಿಂದ, ಇವುಗಳ ಸೇವನೆಯಲ್ಲಿ ಮಿತಿ ಕಾಯ್ದುಕೊಂಡರೆ ಆರೋಗ್ಯಕ್ಕೆ ಒಳ್ಳೆಯದು. ಬನ್ನಿ ಇಂದಿನ ಲೇಖನದಲ್ಲಿ ಸೋಡಿಯಂ ಅಂಶ ಸಿಗುವ ನೈಸರ್ಗಿಕ ಆಹಾರ ಪದಾರ್ಥಗಳ ಬಗ್ಗೆ ನೋಡೋಣ ಬನ್ನಿ.

ಪಾಲಕ್ ಸೊಪ್ಪು

ಹಸಿರೆಲೆ ತರಕಾರಿಯಲ್ಲಿ, ತುಂಬಾನೇ ಪೌಷ್ಟಿಕಸತ್ವಗಳನ್ನು ಒಳಗೊಂಡಿರುವ ಸೊಪ್ಪು ಎಂದರೆ ಅದು ಪಾಲಕ್ ಸೊಪ್ಪು. ತನ್ನಲ್ಲಿ ಯಥೇಚ್ಛವಾಗಿ ಸೋಡಿಯಂ ಅಂಶವನ್ನು ಒಳಗೊಂಡಿರುವು ದರಿಂದ, ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಸೋಡಿಯಂ ಅಂಶ, ಈ ತರಕಾರಿಯ ಮೂಲಕ ನೈಸರ್ಗಿಕವಾಗಿ ಸಿಕ್ಕಂತಾಗುತ್ತದೆ.

ಈ ಬಗ್ಗೆ ತಜ್ಞರು ಹೇಳುವ ಪ್ರಕಾರ, ಒಂದು ಕಟ್ಟು ಪಾಲಕ್ ಸೊಪ್ಪಿನಲ್ಲಿ ಸರಿಸುಮಾರು 120 ಮಿಲಿ ಗ್ರಾಂ ಗಿಂತಲೂ ಹೆಚ್ಚಿನ ಪ್ರಮಾಣದ ಸೋಡಿಯಂ ಅಂಶವನ್ನು ನಿರೀಕ್ಷೆ ಮಾಡಬಹುದಂತೆ! ಹೀಗಾಗಿ ತಮ್ಮ ದೈನಂದಿನ ಆಹಾರಪದ್ಧತಿಯಲ್ಲಿ, ಈ ಸೊಪ್ಪಿನ ಪಲ್ಯ ಮಾಡಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ದೇಹದಲ್ಲಿ ಸೋಡಿಯಂ ಅಂಶದ ಕೊರತೆಯನ್ನು ನೀಗಿಸಬಹುದಾಗಿದೆ.

ಬೀಟ್ರೂಟ್

ಕೆಂಪು ಬಣ್ಣ ಹೊಂದಿರುವ ತರಕಾರಿ ಎಂದೇ ಕರೆಯಲಾಗುವ, ಬೀಟ್ರೂಟ್‌ನ್ನು ಹೆಚ್ಚಿನವರು ಇಷ್ಟ ಪಡುವುದಿಲ್ಲ. ಆದರೇನಂತೆ ಈ ತರಕಾರಿಯಲ್ಲಿ ಸಿಗುವ ಆರೋಗ್ಯ ಪ್ರಯೋಜನಗಳು, ಗೊತ್ತಾದರೆ, ಆಮೇಲೆ, ಬಿಟ್ಟು ಬಿಡದೇ ಸೇವಿಸುತ್ತಾರೆ ಅಷ್ಟೇ! ಮುಖ್ಯವಾಗಿ ಈ ತರಕಾರಿಯಲ್ಲೂ ಕೂಡ ಸೋ ಡಿಯಂ ಅಂಶ, ಯಥೇಚ್ಛವಾಗಿ ಸಿಗುತ್ತದೆ.
ಹೀಗಾಗಿ ಈ ತರಕಾರಿಯ ಬಗ್ಗೆ ಅಸಡ್ಡೆ ಮಾಡದೇ, ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಂಡರೆ, ಆರೋಗ್ಯವೃದ್ಧಿ ಆಗುವುದರ ಜೊತೆಗೆ, ಆರೋಗ್ಯಕ್ಕೆ ಬೇಕಾಗುವ ಸೋಡಿಯಂ ಅಂಶಕ್ಕೆ ಎಂದಿಗೂ ಕೊರತೆ ಉಂಟಾಗದಂತೆ ನೋಡಿಕೊಳ್ಳಬಹುದು.

ದಿನಕ್ಕೊಂದು ಬೇಯಿಸಿದ ಮೊಟ್ಟೆ

ದಿನಕ್ಕೊಂದು ಮೊಟ್ಟೆ ತಿಂದರೆ ವೈದ್ಯರಿಂದ ದೂರವಿಡಬಹುದು, ಜೊತೆಗೆ ದೇಹದಲ್ಲಿ ಉಂಟಾ ಗುವ ಸೋಡಿಯಂ ಕೊರತೆಯನ್ನು ಕೂಡ ನೀಗಿಸಬಹುದು! ತಜ್ಞರು ಹೇಳುವ ಪ್ರಕಾರ, ಮೊಟ್ಟೆಯಲ್ಲಿ 150 ಮಿಲಿ ಗ್ರಾಂ ಸೋಡಿಯಂ ಅಂಶ ಕಂಡು ಬರುವುದರಿಂದ, ಇವು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಅಭಿಪ್ರಾಯ ಪಡುತ್ತಾರೆ.

ಮೊಟ್ಟೆಯ ಬಿಳಿಭಾಗಕ್ಕಿಂತ ಹೆಚ್ಚಾಗಿ, ಹಳದಿ ಭಾಗದಲ್ಲಿ ಸೋಡಿಯಂ ಅಂಶ ಕಂಡು ಬರುತ್ತದೆ ಯಂತೆ. ಹೀಗಾಗಿ ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ, ಆರೋಗ್ಯಕ್ಕೆ ಬೇಕಾಗುವ ಸೋಡಿಯಂ ಅಂಶವನ್ನು ನೀಗಿಸಿಕೊಳ್ಳಬಹುದು.

ಮೊಸರು

ಹಾಲಿನ ಉಪ ಉತ್ಪನ್ನವಾದ ಮೊಸರಿನಲ್ಲಿ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು, ಸಿಗುವುದರ ಜೊತೆಗೆ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಸೋಡಿಯಂ ಅಂಶ ಕೂಡ ಹೇರಳವಾಗಿ ಕಂಡು ಬರುತ್ತದೆ. ತಜ್ಞರು ಹೇಳುವ ಪ್ರಕಾರ, ಒಂದು ಕಪ್ ಮೊಸರಿನಲ್ಲಿ 125 ಮಿಲಿಗ್ರಾಂ ಸೋಡಿಯಂ ಅಂಶ ಕಂಡು ಬರುತ್ತದೆಯಂತೆ.

ಮಜ್ಜಿಗೆ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಗುಣ ಹೊಂದಿರುವ ಮಜ್ಜಿಗೆಯನ್ನು, ದಿನಾ ಒಂದು ಲೋಟ ಕುಡಿಯುತ್ತಾ ಬರುವುದರಿಂದ 200 ಮಿಲಿ ಗ್ರಾಂ ಸೋಡಿಯಂ ಆರೋಗ್ಯಕ್ಕೆ ಸಿಕ್ಕಂತಾಗುತ್ತದೆ. ಅಷ್ಟೇ ಅಲ್ಲದೆ ಹಾಲಿನ ಉಪ ಉತ್ಪನ್ನವಾದ ಈ ಮಜ್ಜಿಗೆಯಲ್ಲಿ ಎಲೆಕ್ಟ್ರೋಲೈಟ್ ಅಂಶಗಳು ಹಾಗೂ ನೀರಿನ ಅಂಶಗಳು ಯಥೇಚ್ಛವಾಗಿ ಸಿಗುವುದರಿಂದ, ದೇಹದಲ್ಲಿ ಕಂಡು ಬರುವ ನಿರ್ಜಲೀಕರಣ ಸಮಸ್ಯೆ ನಿವಾರಣೆಯಾಗಿ, ಆರೋಗ್ಯವೃದ್ಧಿಗೆ ಸಹಾಯವಾಗುತ್ತದೆ.
ಹೀಗಾಗಿ ಪ್ರತಿದಿನ ಮಧ್ಯಾಹ್ನ ಊಟದ ಬಳಿಕ, ಒಂದು ಲೋಟ ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿ ಕೊಳ್ಳಿ. ಸಾಧ್ಯವಾದರೆ ಮನೆಯಲ್ಲಿಯೇ ಮಜ್ಜಿಗೆ ಮಾಡಿ ಕುಡಿದರೆ ಒಳ್ಳೆಯದು. ಮುಖ್ಯವಾಗಿ ಮಜ್ಜಿಗೆಗೆ ಉಪ್ಪು ಹಾಕದೇ ಕುಡಿಯುವ ಅಭ್ಯಾಸ ಇಟ್ಟುಕೊಳ್ಳಿ.

- Advertisement -

Related news

error: Content is protected !!