Tuesday, April 16, 2024
spot_imgspot_img
spot_imgspot_img

ಸ್ಟೇಟ್ ಬ್ಯಾಂಕ್ ತಲಪಾಡಿ ಸರಕಾರಿ ಬಸ್ಸಿನಲ್ಲಿ ತುಂಬಿ ತುಳುಕುತ್ತಿರುವ ಪ್ರಯಾಣಿಕರು

- Advertisement -G L Acharya panikkar
- Advertisement -

ಮಂಗಳೂರು: ಸರಕಾರ ಹಾಗೂ ಜಿಲ್ಲಾಡಳಿತ ಸೇರಿ ಮೊನ್ನೆಯಷ್ಟೆ ಬಸ್‌ನಲ್ಲಿ ಒಂದು ಸೀಟಲ್ಲಿ ಒಬ್ಬರೇ ಕುಳಿತುಕೊಳ್ಳಬೇಕೆಂದು ಆದೇಶ ಹೊರಡಿಸಿತ್ತು. ಆದರೆ ಈ ನಿಯಮಗಳು ಸರಕಾರಿ ಬಸ್ಸಿಗೆ ಅನ್ವಯವಾಗುವುದಿಲ್ಲ ಎನ್ನುವ ರೀತಿಯಲ್ಲಿ ಪ್ರಯಾಣಿಕರು ಬಸ್ಸಿನಲ್ಲಿ ತುಂಬಿ ತುಳುಕುತ್ತಿರುವ ದೃಶ್ಯ ಕಂಡುಬ0ದಿದ್ದು ಸ್ಟೇಟ್ ಬ್ಯಾಂಕ್ ತಲಪಾಡಿ ಸರಕಾರಿ ಬಸ್ಸ್ ನಂ47ರಲ್ಲಿ.


ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸರಕಾರಿ ಬಸ್ಸುಗಳಲ್ಲಿ ಜನರು ತುಂಬಿ ತುಳುಕುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಕೊರೊನಾ ನಿಯಮಗಳು ಸರಕಾರಿ ಬಸ್ಸುಗಳಿಗೆ ಅನ್ವಯಿಸಲ್ವೇ? ಎನ್ನುವ ಪ್ರಶ್ನೆ ವ್ಯಕ್ತವಾಗಿದೆ. ಮೂರನೇ ಅಲೆಯ ಬಗ್ಗೆ ಈಗಾಗಲೇ ಸರಕಾರ ಹಾಗೂ ವಿಜ್ಞಾನಿಗಳ ತಂಡ ಎಚ್ಚರಿಕೆ ನೀಡಿದ್ದು ಸಾಕಷ್ಟು ಮುಂಜಾಗ್ರತೆಯನ್ನು ಪಾಲಿಸಬೇಕಾಗಿದೆ. ಆದರೆ ಈಗ ತಾನೇ ಲಾಕ್ಡೌನ್ ಸಡಿಲಿಸಿದ್ದು ಸುರಕ್ಷತಾ ನಿಯಮಗಳನ್ನು ಪಾಲಿಸದೆ ಇರುವುದು ಮತ್ತೆ ಕಠಿಣ ನಿಯಮಗಳನ್ನು ಜಾರಿಗೊಳಿಸುವುದು ಅನಿವಾರ್ಯ ಎಂಬ ಸ್ಥಿತಿಯಾಗಿದೆ. ಮೂರನೇ ಅಲೆಗೆ ಭರ್ಜರಿ ತಯಾರಿ ಎನ್ನುವ ರೀತಿಯಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಪ್ರಯಾಣಿಸುವ ದೃಶ್ಯ ನೋಡುವಾಗ ಮೂರನೇ ಅಲೆಯ ಲಾಕ್‌ಡೌನ್ ಇನ್ನು ಹೆಚ್ಚು ದೂರ ಇಲ್ಲ ಎನ್ನುವ ಸ್ಧಿತಿ ಎದುರಾಗಿದೆ.

- Advertisement -

Related news

error: Content is protected !!