Monday, June 22, 2026
spot_imgspot_img
spot_imgspot_img

ಹಣ್ಣಿನ ಜ್ಯೂಸ್ ಎಂದು ತಿಳಿದು ಆಲ್ಕೊಹಾಲ್ ಸೇವಿಸಿ ಮೃತಪಟ್ಟ 5 ವರ್ಷದ ಬಾಲಕ!

- Advertisement -
- Advertisement -
driving

ತಮಿಳುನಾಡು: ಹಣ್ಣಿನ ಜ್ಯೂಸ್ ಎಂದು ತಿಳಿದು ಆಲ್ಕೊಹಾಲ್ ಸೇವಿಸಿದ್ದ 5 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಅಣ್ಣಾನಗರ್ ನಲ್ಲಿ ನಡೆದಿದೆ. ಮೃತ ಬಾಲಕ ರಾಕೇಶ್(5) ಎನ್ನಲಾಗಿದೆ.

ಆತನ ತಾತ ಚಿನ್ನಸ್ವಾಮಿ (62) ಅವರಿಗೆ ಕುಡಿತದ ಚಟವಿತ್ತು. ಹೀಗಾಗಿ ಮನೆಯಲ್ಲಿಯೇ ಬ್ರಾಂಡಿ ಬಾಟಲಿಯನ್ನು ತಂದು ಇಟ್ಟುಕೊಂಡಿದ್ದರು. ತಾತನ ರೂಮಿನಲ್ಲಿ ಬ್ರಾಂಡಿ ಬಾಟಲಿಯನ್ನು ಜ್ಯೂಸ್ ಎಂದು ತಪ್ಪು ತಿಳಿದ ರಾಕೇಶ್ ಅದನ್ನು ಕುಡಿದಿದ್ದಾನೆ.

ಆತ ಕುಡಿದ ಸಂಗತಿ ಯಾರಿಗೂ ತಿಳಿದಿರಲಿಲ್ಲ. ನಂತರ ರಾಕೇಶ್ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಅದನ್ನು ಕಂಡು ರಾಕೇಶ್ ತಾತ ಚಿನ್ನಸ್ವಾಮಿ ಕೂಡಾ ಅನಾರೋಗ್ಯಕ್ಕೀಡಾದರು. ಇಬ್ಬರನ್ನೂ ಮನೆಯವರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

- Advertisement -

Related news

error: Content is protected !!