Sunday, July 26, 2026
spot_imgspot_img
spot_imgspot_img

ಹೆಬ್ರಿ: ಆಸ್ತಿಗಾಗಿ ಪತ್ನಿಯಿಂದ ಪತಿಯ ಹತ್ಯೆಗೆ ಯತ್ನ

- Advertisement -
- Advertisement -

ಮುದ್ರಾಡಿ: ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿ ಪತಿಯನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ಶನಿವಾರ ಮುದ್ರಾಡಿ ಗ್ರಾಮದ ಸುಬ್ಬಣ್ಣಕಟ್ಟೆ ಬಳಿ ನಡೆದಿದೆ.

ಜಯನಂದ ಕಾಮತ್ ಪತ್ನಿ ಅಮಿತಾ ಕಾಮತ್ ಮತ್ತು ಮಗ ದೀಕ್ಷಿತ್ ನೊಂದಿಗೆ ಮುದ್ರಾಡಿ ಗ್ರಾಮದ ಸುಬ್ಬಣ್ಣಕಟ್ಟೆಯಲ್ಲಿ ವಾಸವಾಗಿದ್ದಾರೆ. ಜಯನಂದ ಅವರ ಹೆಸರಿನಲ್ಲಿ ಪೆರ್ಡೂರಿನಲ್ಲಿ ಜಾಗವಿದ್ದು ಅದನ್ನು ತನ್ನ ಹೆಸರಿಗೆ ಮಾಡಿಕೊಡಬೇಕೆಂದು ಪತ್ನಿ ತಕರಾರು ತೆಗೆಯುತ್ತಿದ್ದಳು.

ಸುಮಾರು ಮೂರು ದಿನಗಳಿಂದ ಅಮಿತಾಳ ಸ್ನೇಹಿತ ಮಂಜುನಾಥ್ ಕಾಮತ್ ಇವರ ಮನೆಯಲ್ಲೇ ಉಳಿದುಕೊಂಡಿದ್ದು, ಶನಿವಾರ ರಾತ್ರಿ ಮಗ ದೀಕ್ಷಿತ್ ಮತ್ತು ಮಂಜುನಾಥ ಸೇರಿಕೊಂಡು ಜಯಾನಂದ ಅವರ ಹೆಸರಿಗೆ ಬರೆದುಕೊಡುವಂತೆ ಹೇಳಿದ್ದರು ಎನ್ನಲಾಗಿದೆ.

ಅಲ್ಲದೆ ಕೈ ಕಾಲುಗಳನ್ನು ಕಟ್ಟಿ ತಲೆದಿಂಬಿನಿಂದ ಉಸಿರುಗಟ್ಟೀಸಿ ಕೊಲೆಗೆ ಯತ್ನಿಸಿದ್ದರು. ಅಂತಿಮವಾಗಿ ಆಸ್ತಿ ಕೊಡುವುದಾಗಿ ಹೇಳಿದಾಗ ಸಹಿ ಪಡೆದುಕೊಂಡು ಬಿಟ್ಟಿದ್ದಾರೆ ಎಂದು ದೂರು ದಾಖಲಾಗಿದೆ.

- Advertisement -

Related news

error: Content is protected !!