Saturday, July 25, 2026
spot_imgspot_img
spot_imgspot_img

ಹೆಬ್ರಿ: ಮದ್ಯದ ಅಮಲಿನಲ್ಲಿ ಸಾರಾಯಿ ಬಾಟಲಿನಿಂದ ಹಲ್ಲೆ

- Advertisement -
- Advertisement -
vtv vitla

ಹೆಬ್ರಿ : ಸಾರಾಯಿ ಕುಡಿದು ಮಾತನಾಡುತ್ತಿದ್ದಾಗ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ವ್ಯಕ್ತಿಯೋರ್ವನ ಮೇಲೆ ಸಾರಾಯಿ ಬಾಟಲಿಯಲ್ಲಿ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಡಾರು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಕರುಣಾಕರ ರಾವ್, ರತ್ನಾಕರ ರಾವ್, ರಾಜೇಶ್ ಮೂವರು ಜೊತೆಗೆ ಮನೆಯಲ್ಲಿ ಸಾರಾಯಿ ಸೇವಿಸುತ್ತ ಕುಳಿತ್ತಿದ್ದರು. ಈ ವೇಳೆ ಕರುಣಾಕರ ರಾವ್ ಬಳಿ ಆರೋಪಿ ರತ್ನಾಕರ ರಾವ್ ಕೆಟ್ಟದಾಗಿ ಮಾತನಾಡಿದ್ದು , ಆಗ ನೀನ್ಯಾಕೆ ಕೆಟ್ಟದಾಗಿ ಮಾತನಾಡುತ್ತೀಯಾ ಎಂದು ಪ್ರಶ್ನಿಸಿದಾಗ ರತ್ನಾಕರ ರಾವ್ ಸಾರಾಯಿ ಬಾಟಲಿಯಿಂದ ಒಡೆದು ನೆಲಕ್ಕೆ ಬೀಳಿಸಿ ರತ್ನಾಕರ್ ಮೇಲೆ ಬಾಟಲಿಯಿಂದ ಕುತ್ತಿಗೆ, ಗಲ್ಲದ ಎಡಭಾಗ, ಎದೆಯ ಎಡಭಾಗ ಹಾಗೂ ಬೆನ್ನಿಗೆ ಹಲ್ಲೆ ಮಾಡಿ ರಕ್ತಗಾಯಗೊಳಿಸಿ, ನಿನ್ನನ್ನು ಈಗಲೇ ಕೊಂದು ಹಾಕುತ್ತೇನೆ ಎಂದು ಜೀವಬೆದರಿಕೆ ಹಾಕಿದ್ದರೆ.

ತಕ್ಷಣ ಸ್ಥಳದಲ್ಲಿದ್ದ ನಯನ ಹಾಗೂ ರಾಜೇಶ್ ಸೇರಿ ಆರೋಪಿಯನ್ನು ತಡೆದು ಬೊಬ್ಬೆ ಹಾಕಿದಾಗ ಆತ ಬಾಟಲಿ ಚೂರನ್ನು ಅಲ್ಲಿಯೇ ಬಿಸಾಡಿ ಓಡಿ ಹೋಗಿದ್ದಾನೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
- Advertisement -

Related news

error: Content is protected !!