Thursday, April 18, 2024
spot_imgspot_img
spot_imgspot_img

ಚಂದ್ರನ ಅತ್ಯಂತ ಸ್ಪಷ್ಟ ಫೋಟೋ ಸೆರೆಹಿಡಿದ 16 ವರ್ಷದ ಬಾಲಕ

- Advertisement -G L Acharya panikkar
- Advertisement -

ಪುಣೆ: ಭೂಮಿಯ ಸುತ್ತಲೂ ಸುತ್ತುವ ಚಂದ್ರನೆಂದರೆ ಪುಟ್ಟ ಮಕ್ಕಳಿಂದ ಹಿರಿಯ ವಿಜ್ಞಾನಿಗಳವರೆಗೂ ಎಂಥದೋ ಕುತೂಹಲ. ಚಂದ್ರನ ಮೇಲ್ಮೈ ಹೇಗಿರಬಹುದು.. ಅಲ್ಲಿ ನಡೆದಾಡಿದರೆ ಯಾವ ಅನುಭವವಾಗುತ್ತದೆ. ಅಲ್ಲಿನ ವಾತಾವರಣ ಹೇಗಿದೆ..? ಹೀಗೆ ಹತ್ತಾರು ಪ್ರಶ್ನೆಗಳು ಚಂದ್ರ ಕಣ್ಣಿಗೆ ಬೀಳುತ್ತಲೇ ಹುಟ್ಟಿಕೊಳ್ಳುತ್ತವೆ.

ಭೂಮಿಯಿಂದ ಸುಮಾರು 4 ಲಕ್ಷ ಕಿಲೋಮೀಟರ್​ನಲ್ಲಿರುವ ಚಂದ್ರ ನಮಗೆ ಯಾವತ್ತಿಗೂ ಅಸ್ಪಷ್ಟವೇ. ಅವನನ್ನ ಹತ್ತಿರದಿಂದ ನೋಡಬೇಕೆಂದರೆ ಟೆಲಿಸ್ಕೋಪ್​ಗಳನ್ನು ಬಳಸಬೇಕು. ಡಿಎಸ್​ಎಲ್​ಆರ್ ಕ್ಯಾಮೆರಾಗಳು ಸಹ ಚಂದ್ರನನ್ನ ಸೆರೆಹಿಡಿಯುವಲ್ಲಿ ಸೋಲುತ್ತವೆ.

ಆದರೆ ಪುಣೆಯ 16 ವರ್ಷದ ಬಾಲಕನೋರ್ವ ಚಂದ್ರನ ಸ್ಪಷ್ಟ ಫೋಟೋಗಳನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಮೂಲಕ ಸಾಧನೆ ಮಾಡಿದ್ದಾನೆ. ಪ್ರಥಮೇಶ್ ಜಾಜು ಈ ಸಾಧನೆ ಮಾಡಿದ ಬಾಲಕ. ಪ್ರಥಮೇಶ್ ಜಾಜು ಹೇಗೆ ಸ್ಪಷ್ಟ ಚಂದ್ರನ ಫೋಟೋ ಸೆರೆಹಿಡಿದ ಅನ್ನೋದನ್ನ ಆತನ ಮಾತುಗಳಲ್ಲೇ ಕೇಳಬೇಕು.

ಪ್ರಥಮೇಶ್, ಚಂದ್ರನ ಫೋಟೋ ಸೆರೆಹಿಡಿದ ಬಾಲಕ
ನಾನು ಸೆರೆಹಿಡಿದಿರುವ ಚಿತ್ರದ ಕಚ್ಚಾ ಡೇಟಾ 100ಜಿಬಿ ಇತ್ತು. ಅದನ್ನು ಪ್ಒಸೆಸ್ ಮಾಡಿದಾಗ ಅದು ಹೆಚ್ಚು ಡೇಟಾ ಬಳಸಿಕೊಳ್ಳುತ್ತದೆ. ಹೀಗಾಗಿ ಫೋಟೋದ ಒಟ್ಟು ಡೇಟಾ 186 ಜಿಬಿಯಾಗಿದೆ. ನಾನು ಅವನ್ನೆಲ್ಲ ಒಟ್ಟಿಗೆ ಸ್ಟಿಚ್​ ಮಾಡಿದ್ದು ಕೊನೆಯ ಫೈಲ್ 600 ಎಂಬಿಯಷ್ಟಾಗಿದೆ. ನಾನು ಮೇ 3 ನೇ ತಾರೀಖಿನ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ಫೋಟೋವನ್ನ ಸೆರೆಹಿಡಿದೆ. ಸುಮಾರು 4 ಗಂಟೆಗಳ ಕಾಲ ಫೋಟೋ ಮತ್ತು ವಿಡಿಯೋಗಳನ್ನು ಕ್ಯಾಪ್ಚರ್ ಮಾಡಿದೆ. ಸ್ಪಷ್ಟ ಚಂದ್ರನ ಫೋಟೋಗಾಗಿ ನಾನು ಒಟ್ಟು 50,000 ಫೋಟೋಗಳನ್ನು ತೆಗೆದಿದ್ದೇನೆ. ನಾನು ಅವನ್ನೆಲ್ಲ ಒಟ್ಟಿಗೇ ಒಲಿಗೆ ಹಾಕಿ ಇಮೇಜ್​ನ್ನು ಶಾರ್ಮ್​ ಮಾಡಿ ಸ್ಪಷ್ಟ ಚಿತ್ರ ತೆಗೆದಿದ್ದೇನೆ. ಎರಡು ವಿಭಿನ್ನ ಇಮೇಜ್​ಗಳನ್ನು ಬಳಸಿ ಈ ಫೋಟೋಗೆ ಮೂರು ಆಯಾಮಗಳನ್ನ ನೀಡಲಾಗಿದ್ದು ಇದು ಹೆಚ್​ಡಿಆರ್​ ಕೊಂಪೊಸೈಟ್​​ನಲ್ಲಿದೆ. ತ್ರೈಮಾಸಿಕದ ಖನಿಜ ಚಂದ್ರ ಅತ್ಯಂತ ಸ್ಪಷ್ಟ ಫೋಟೋವನ್ನ ನಾನು ಇದೇ ಮೊದಲ ಬಾರಿಗೆ ತೆಗೆದಿದ್ದು.
ಪ್ರಥಮೇಶ್ ಜಾಜು ಸೆರೆಹಿಡಿದ ಗ್ಯಾಲಕ್ಸಿ ಫೋಟೋ

ಕೆಲವು ಆರ್ಟಿಕಲ್​ಗಳನ್ನು ಓದಿ ಹಾಗೂ ಯೂಟ್ಯೂಬ್​ ವಿಡಿಯೋಗಳನ್ನು ನೋಡಿ ಪ್ರೊಸೆಸ್ಸಿಂಗ್ ಮತ್ತು ಇಮೇಜ್​ ಕ್ಯಾಪ್ಚರಿಂಗ್ ಕಲಿತೆ ಎನ್ನುವ ಪ್ರಥಮೇಶ್, ನಾನು ಭೌತಶಾಸ್ತ್ರಜ್ಞ ಆಗಬೇಕು ಮತ್ತು ಆಸ್ಟ್ರೋನಮಿಯನ್ನ ಕಲಿಯಬೇಕೆಂದಿದ್ದೇನೆ. ಆದರೆ ಆಸ್ಟ್ರೋ ಫೋಟೋಗ್ರಪಿ ನನಗೆ ಕೇವಲ ಹವ್ಯಾಸವಷ್ಟೇ ಎಂದು ಹೇಳಿಕೊಂಡಿದ್ದಾನೆ.

driving
- Advertisement -

Related news

error: Content is protected !!