
ಹೊಸದಿಲ್ಲಿ, ಮೇ 2: ಜಮ್ಮುವಿನ ಬಂತಲಾಬ್‌ನಲ್ಲಿ ಶುಕ್ರವಾರ ಕುಸಿದ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಅವಶೇಷಗಳ ಅಡಿಯಲ್ಲಿ ಸಿಲುಕಿದ ಮೂವರು ಕಾರ್ಮಿಕರ ಮೃತದೇಹಗಳು ಶನಿವಾರ ಮುಂಜಾನೆ ಪತ್ತೆಯಾಗಿವೆ. ಮೃತಪಟ್ಟ ಕಾರ್ಮಿಕರು ಛತ್ತೀಸ್‌ಗಢದ ನಿವಾಸಿಗಳು ಎಂದು ಹೇಳಲಾಗಿದೆ. ಜಮ್ಮುವಿನ ಹೊರವಲಯದಲ್ಲಿರುವ ಥಾಥರ್‌ನ ಪೆಟ್ರೋಲ್ ಪಂಪ್ ಸಮೀಪ ಶುಕ್ರವಾರ ಅಪರಾಹ್ನ ಈ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಭಾಗ ಕುಸಿದ ಪರಿಣಾಮ ಅದರ ಅಡಿಯಲ್ಲಿ ನಾಲ್ವರು ಕಾರ್ಮಿಕರು ಸಿಲುಕಿಕೊಂಡಿದ್ದರು.




ಇವರಲ್ಲಿ ಒಬ್ಬರು ಕಾರ್ಮಿಕರನ್ನು ತುರ್ತು ತಂಡಗಳು ಶುಕ್ರವಾರ ರಕ್ಷಿಸಿದ್ದವು. ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಮೂವರ ಮೃತದೇಹಗಳು ಪತ್ತೆಯಾಗುವುದರೊಂದಿಗೆ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ.
ಶುಕ್ರವಾರ ಅಪರಾಹ್ನ ಸುಮಾರು 3.30ಕ್ಕೆ ನಾಲ್ವರು ಕಾರ್ಮಿಕರು ಸಿಲುಕಿಕೊಂಡ ಬಳಿಕ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಪೊಲೀಸ್, ಸೇನೆ ಹಾಗೂ ನಾಗರಿಕ ಆಡಳಿತದ ತಂಡಗಳು ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದವು.ಕಳೆದ ವರ್ಷ ಪ್ರವಾಹದಿಂದ ಹಾನಿಗೀಡಾದ ಸೇತುವೆಯ ಸಮೀಪದ ಗೋಡೆಯ ದುರಸ್ಥಿ ಕಾರ್ಯವನ್ನು ಕಾರ್ಮಿಕರು ನಿರ್ವಹಿಸುತ್ತಿದ್ದರು.








