Monday, May 6, 2024
spot_imgspot_img
spot_imgspot_img

ಹಬ್ಬಗಳ ಹಿನ್ನೆಲೆಯಲ್ಲಿ 200 ವಿಶೇಷ ರೈಲು ವ್ಯವಸ್ಥೆ -ಭಾರತೀಯ ರೈಲ್ವೆ ಇಲಾಖೆ

- Advertisement -G L Acharya panikkar
- Advertisement -

ಬೆಂಗಳೂರು : ಹಬ್ಬಗಳ ಹಿನ್ನೆಲೆಯಲ್ಲಿ 200 ವಿಶೇಷ ರೈಲುಗಳನ್ನು ಹೆಚ್ಚುವರಿಯಾಗಿ ಓಡಿಸುವುದಾಗಿ ಹೇಳಿದ್ದ ರೈಲ್ವೆ ಮಂಡಳಿ, ಸದ್ಯ 30 ವಿಶೇಷ ರೈಲುಗಳ ಸಂಚಾರಕ್ಕೆ ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಈ ಹೆಚ್ಚುವರಿ ವಿಶೇಷ ರೈಲುಗಳು ಸಂಚಾರ ಆರಂಭಿಸಲಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ಇವು ಅಕ್ಟೋಬರ್ 15ರಿಂದ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ 30 ರೈಲುಗಳ ಪೈಕಿ ಐದು ರೈಲುಗಳು ಕರ್ನಾಟಕಕ್ಕೂ ಬರಲಿವೆ.

30 ರೈಲುಗಳಲ್ಲಿ ಹೆಚ್ಚಿನವು ಎಸಿ ಎಕ್ಸ್​ಪ್ರೆಸ್ ರೈಲುಗಳಾಗಿವೆ. ತುರಂತೋ, ರಾಜಧಾನಿ ಮತ್ತು ಶತಾಬ್ದಿ ಎಕ್ಸ್​ಪ್ರೆಸ್ ರೈಲುಗಳೂ ಇವೆ. ಅಸ್ಸಾಮ್​ನ ಕಾಮಾಕ್ಯ, ರಾಜಸ್ಥಾನದ ಬಾರ್ಮರ್, ಪಶ್ಚಿಮ ಬಂಗಾಳದ ಹೌರಾಗಳಿಗೆ ಯಶವಂತಪುರದಿಂದ ರೈಲುಗಳ ವ್ಯವಸ್ಥೆ ಮಾಡಲಾಗಿದೆ.ಇವು ವಾರಕ್ಕೊಮ್ಮೆ ಹೋಗಿಬರುತ್ತವೆ.

ಬೆಂಗಳೂರು ಮತ್ತು ಚೆನ್ನೈ ಮಧ್ಯೆ ಶಬಾಬ್ದಿ ಮತ್ತು ಡಬಲ್ ಡೆಕರ್ ರೈಲುಗಳನ್ನು ಓಡಿಸಲಾಗುವುದು ಎಂದು ಮಂಡಳಿ ಹೇಳಿದೆ.
ಕಾಮಾಕ್ಯ-ಯಶವಂತಪುರ ಎಸಿ ಎಕ್ಸ್​ಪ್ರೆಸ್ (ವಾರಕ್ಕೊಮ್ಮೆ), ಬಾರ್ಮರ್-ಯಶವಂತಪುರ ಎಸಿ ಎಕ್ಸ್​ಪ್ರೆಸ್ (ವಾರಕ್ಕೊಮ್ಮೆ), ಹೌರಾ-ಯಶವಂತಪುರ ಎಸಿ ಎಕ್ಸ್​ಪ್ರೆಸ್ (ವಾರಕ್ಕೊಮ್ಮೆ), ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್​ಪ್ರೆಸ್ (ಮಂಗಳವಾರ ಬಿಟ್ಟು ವಾರಕ್ಕೆ ಆರು ದಿನ), ಚೆನ್ನೈ-ಬೆಂಗಳೂರು ಡಬಲ್ ಡೆಕರ್ (ಪ್ರತಿದಿನ) ರೈಲುಗಳು ಕರ್ನಾಟಕದಲ್ಲಿ ಸಂಚರಿಸಲಿವೆ.

- Advertisement -

Related news

error: Content is protected !!