.ಮಂಗಳೂರು, ಜೂನ್ 21: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ಜಿಲ್ಲಾ ಕಂಬಳ ಸಮಿತಿಯ ಸಭೆ ಭಾನುವಾರ ಮೂಡುಬಿದಿರೆಯಲ್ಲಿ ನಡೆಯಿತು.

ಸಭೆಯಲ್ಲಿ ಮೂಡುಬಿದಿರೆ ಹೊಸಬೆಟ್ಟು ನಿವಾಸಿ ಚಂದ್ರಹಾಸ ಸಾಧು ಸನಿಲ್ ಅವರನ್ನು ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.ಈ ವೇಳೆ 2026-27ನೇ ಸಾಲಿನ ಕಂಬಳ ಸೀಸನ್ನ ವೇಳಾಪಟ್ಟಿಯನ್ನು ಸಮಿತಿ ಪ್ರಕಟಿಸಿದೆ. ಈ ಬಾರಿಯ ವಿಶೇಷವೆಂದರೆ, ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜಿಸಲು ತೀರ್ಮಾನಿಸಲಾಗಿದೆ. ದಸರಾ ಉತ್ಸವದ ಅಂಗವಾಗಿ ಈ ಕಂಬಳ ನಡೆಯಲಿದೆ ಎಂದು ತಿಳಿಸಲಾಗಿದೆ.
2026-27ರ ಕಂಬಳ ಕೂಟಗಳ ವೇಳಾಪಟ್ಟಿ
:ಪಣಿಪಿಲ – ನವೆಂಬರ್ 7,
ಸಾಣೂರು – ನವೆಂಬರ್ 14
ಪಣಿಪಿಲ — ನವೆಂಬರ್ 7
ಸಾಣೂರು — ನವೆಂಬರ್ 14
ಕೋಡಂಗೆ — ನವೆಂಬರ್ 21
ಕಕ್ಕೆಪದವು — ನವೆಂಬರ್ 28
ಹೋಕ್ಕಾಡಿಗೋಳಿ — ಡಿಸೆಂಬರ್ 5
ಬಾರಾಡಿಬೀಡು — ಡಿಸೆಂಬರ್ 12
ಮಂಗಳೂರು — ಡಿಸೆಂಬರ್ 19
ಮೂರ್ಲ — ಡಿಸೆಂಬರ್ 26
ಬೊಳ್ಮುಂಜ — ಡಿಸೆಂಬರ್ 27
ಮಿಯ್ಯಾರು — ಜನವರಿ 2
ನರಿಂಗಾನ — ಜನವರಿ 9
ಅಡ್ಡೆ— ಜನವರಿ 16
ಮೂಡುಬಿದಿರೆ — ಜನವರಿ 23
ಪುತ್ತೂರು — ಜನವರಿ 30
ಇಕಳ — ಫೆಬ್ರುವರಿ 6
ಜಿಪ್ಪಿನಮೊಗರು — ಫೆಬ್ರುವರಿ 13
ವಾಮಂಜೂರು — ಫೆಬ್ರುವರಿ 20
ಎರ್ಮಾಳ್ — ಫೆಬ್ರುವರಿ 27
ಬಂಟ್ವಾಳ — ಮಾರ್ಚ್ 6
ಬಂಗಾಡಿ — ಮಾರ್ಚ್ 13
ವೇಣೂರು — ಮಾರ್ಚ್ 20
ಉಪ್ಪಿನಂಗಡಿ — ಮಾರ್ಚ್ 27
ಗುರುವಪುರ — ಏಪ್ರಿಲ್ 3
ಬಳ್ಕುಂಜೆ — ಏಪ್ರಿಲ್ 10
ಹರೆಕಳ — ಏಪ್ರಿಲ್ 17
ಬಡಬೆಟ್ಟು — ಏಪ್ರಿಲ್ 24
ಕಂಬಳ ಪ್ರಿಯರಲ್ಲಿ ಈಗಾಗಲೇ ಹೊಸ ಸೀಸನ್ ಕುರಿತು ಕುತೂಹಲ ಮೂಡಿದ್ದು, ಮೈಸೂರಿನಲ್ಲಿ ನಡೆಯಲಿರುವ ಐತಿಹಾಸಿಕ ಕಂಬಳ ವಿಶೇಷ ಆಕರ್ಷಣೆಯಾಗಲಿದೆ.








