Tuesday, November 24, 2026
spot_imgspot_img
spot_imgspot_img

ಆಶಾ ಕಾರ್ಯಕರ್ತೆಯರ ಧರಣಿ 8ನೇ ದಿನಕ್ಕೆ | ಸಮಸ್ಯೆ ಬಗೆಹರಿಸುತ್ತೇವೆ, ಹೋರಾಟ ಹಿಂಪಡೆಯಿರಿ: ಸಿಎಂ

- Advertisement -
- Advertisement -

ಬೆಂಗಳೂರು: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ ಇಂದಿಗೆ 8ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜಪಾನ್ ನಿಂದ ವಿಡಿಯೋ ಕರೆ (Video Call) ಮೂಲಕ ಮತ್ತೊಮ್ಮೆ ಆಶಾ ಮುಖಂಡರೊಂದಿಗೆ ಮಾತನಾಡುತ್ತಾ “ಶಾಶ್ವತ ಪರಿಹಾರ ಒದಗಿಸಲು ಕಾಲಾವಕಾಶ ನೀಡಿ, ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಚರ್ಚೆ ಮಾಡುವುದಾಗಿ ತಿಳಿಸಿದರು. ಹೋರಾಟ ಹಿಂಪಡೆಯಿರಿ” ಎಂದು ಮನವಿ ಮಾಡಿದರು.

“ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ, ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಆಶಾ ಕಾರ್ಯಕರ್ತೆಯರು ನನ್ನ ಸಹೋದರಿಯರಿದ್ದಂತೆ, ಅವರ ನೋವು, ಸಂಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸದಾ ಅವರೊಂದಿಗಿದೆ” ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಆಶಾ ಕಾರ್ಯಕರ್ತೆಯರು, “ಮುಖ್ಯಮಂತ್ರಿ ಖುದ್ದಾಗಿ ಇಲ್ಲಿಗೆ ಬಂದು ಆದೇಶ ನೀಡುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಇಂದು ಹೋರಾಟವನ್ನು ಬೆಂಬಲಿಸಿ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸ್ವತಂತ್ರ ಸಂಘದ ಪ್ರಧಾನ ಕಾರ್ಯದರ್ಶಿ ಉಮಾಮಣಿ, “ಎಲ್ಲಾ ದುಡಿಯುವ ಮಹಿಳೆಯರು ಒಂದೇ. ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರೆಲ್ಲರೂ ಒಂದೇ. ಒಬ್ಬರನ್ನೊಬ್ಬರು ಎತ್ತಿಕಟ್ಟುವುದು ಸಲ್ಲ. ರಾಜ್ಯ ಸರ್ಕಾರ ಎಲ್ಲರ ಸಮಸ್ಯೆಗಳನ್ನು ಪರಿಹರಿಸಬೇಕು. ಆಶಾ ಕಾರ್ಯಕರ್ತೆಯರ ಹೋರಾಟವನ್ನು ಬೆಂಬಲಿಸುತ್ತಾ, ಅವರ ಬೆರ್ರಿಗಳನ್ನು ಈಡೇರಿಸಬೇಕೆಂದು ನಮ್ಮ ಸಂಘಟನೆ ಆಗ್ರಹಿಸುತ್ತದೆ”

ಖ್ಯಾತ ಸಿನೆಮಾ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, “ಇದು ತುಂಬಾ ನೋವಿನ ವಿಚಾರ. ‘ಬೆಂಗಳೂರು ಹಬ್ಬ’ಕ್ಕೆ ರಾಜ್ಯ ಸರ್ಕಾರ 20 ಕೋಟಿ ರೂಪಾಯಿ ನೀಡಿದೆ, ನಿಗಮ ಮಂಡಳಿಗಳನ್ನು ಸಾಕಲು ಸಾವಿರಾರು ಕೋಟಿ ದುಡ್ಡಿದೆ; ಆದರೆ ಆಶಾ ಕಾರ್ಯಕರ್ತೆಯರಿಗೆ ನೀಡಲು ದುಡ್ಡಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 10,000 ರೂ. ಗೌರವಧನ ನೀಡುವ ಖಚಿತ ಭರವಸೆ ನೀಡಿದ್ದರು, ಆದರೆ ಈ ಬೇಡಿಕೆ ಈಡೇರಿಸಲಿಲ್ಲ. ಹಾಗಾಗಿ ಸಾವಿರಾರು ಆಶಾ ಕಾರ್ಯಕರ್ತೆಯರಲ್ಲಿ ಕ್ಷಮೆ ಕೇಳಬೇಕು ಹಾಗೂ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಒತ್ತಾಯಿಸಿದರು.

ವಕೀಲರು ಹಾಗೂ ಕೆಂಪೇಗೌಡ ಯುವವಾಹಿನಿ ಸಂಘದ ಸ್ಥಾಪಕ ಜಗನ್ನಾಥ ಗೌಡ ಮಾತನಾಡಿ, “ಹಗಲು ರಾತ್ರಿ ಜನರಿಗಾಗಿ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಸರ್ಕಾರ ಇವರನ್ನು ಮಾನವೀಯತೆಯಿಂದ ಕಾಣುತ್ತಿಲ್ಲ. ಕೂಡಲೇ ನಿಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದರು.

ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಉಮೇಶ್ ಆವರೆಗೆರೆ ಮಾತನಾಡಿ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

- Advertisement -

Related news

error: Content is protected !!