Tuesday, July 21, 2026
spot_imgspot_img
spot_imgspot_img

ಬೆಂಗಳೂರಿಂದ 272 ಅಕ್ರಮ ಬಾಂಗ್ಲಾ ವಲಸಿಗರು ಗಡಿಪಾರು

- Advertisement -
- Advertisement -

ಬೆಂಗಳೂರು: ನಗರದ ವಿವಿಧೆಡೆ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡುವ ಕಾರ್ಯಾಚರಣೆ ತೀವ್ರಗೊಂಡಿದೆ. ಇದುವರೆಗೆ ಬೆಂಗಳೂರಿನಿಂದ 272 ಅಕ್ರಮ ಬಾಂಗ್ಲಾ ವಲಸಿಗರನ್ನ ಗಡಿಪಾರು ಮಾಡಲಾಗಿದೆ.

ಈ ಪೈಕಿ 178 ಪುರುಷರು, 94 ಮಹಿಳೆಯರು ಮತ್ತು 12 ಮಕ್ಕಳು ಸೇರಿದ್ದಾರೆ. ಎಲ್ಲರನ್ನು ಪೊಲೀಸರು ಪತ್ತೆ ಮಾಡಿ ಒಟ್ಟಿಗೆ ಗಡಿಪಾರು ಮಾಡಿದ್ದಾರೆ. ಜೊತೆಗೆ ಸಿಸಿಬಿ ಪೊಲೀಸರು ಬಾಂಗ್ಲಾ ವಲಸಿಗರನ್ನ ಕರೆತರುತಿದ್ದವರ ಮೂಲಕ್ಕೆ ಕೈ ಹಾಕಿದ್ದಾರೆ. ಸಿಸಿಬಿ ಪೊಲೀಸರು ಇಡೀ ಬೆಂಗಳೂರಿನಾದ್ಯಂತ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ ಶುರು ಮಾಡಿದ್ದಾರೆ. ಸದ್ಯ ಗುರುತಿಸಲಾದ ಅಕ್ರಮ ವಲಸಿಗರನ್ನು ತಮ್ಮ ದೇಶಕ್ಕೆ ಬಿಡುವ ಕೆಲಸ ಮುಂದುವರಿಸಿದ್ದಾರೆ. ತ್ರಿಪುರಗಡಿಯಿಂದ ಬಿಎಸ್‌ಎಫ್ ಮೂಲಕ ಇವರನ್ನು ಗಡಿಪಾರು ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳ ಎಲೆಕ್ಷನ್ ಹಿನ್ನೆಲೆ ತ್ರಿಪುರಾ ಗಡಿಯಿಂದ ಗಡಿಪಾರು ಮಾಡಲಾಗುತ್ತಿದೆ.

ಅಕ್ರಮ ಬಾಂಗ್ಲಾ ವಲಸಿಗರು ಮೂವರು ಟೇಕೆದಾರರ ಮೂಲಕ ಭಾರತದ ಗಡಿಯೊಳಗೆ ಪ್ರವೇಶಿಸುತ್ತಿದ್ದರಂತೆ. ಓರ್ವ ಟೇಕೆದಾರ ಭಾರತದ ಗಡಿಯವರೆಗೂ ಅವರನ್ನ ಕರೆತರುತ್ತಿದ್ದನಂತೆ. ಮತ್ತೋರ್ವ ಭಾರತದ ಗಡಿ ದಾಟಿಸಿ, ಒಳಗೆ ಕರೆಸಿಕೊಳ್ಳುತ್ತಿದ್ದನಂತೆ, 3ನೇ ಟೇಕೆದಾರ್‌ ಭಾರತದಲ್ಲಿರುವ ಕೆಲಸದ ಬಗ್ಗೆ ಮಾಹಿತಿ ನೀಡಿ, ಅಕ್ರಮ ವಲಸಿಗರಿಗೆ ಕೆಲಸ ಹುಡುಕಿಕೊಡುತ್ತಿದ್ದನಂತೆ. ಈ ಟೇಕೆದಾರ್‌ಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು, ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರನ್ನ ಪತ್ತೆಹಚ್ಚಿ ಗಡಿಪಾರಿಗೆ ಮುಂದಾಗಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!