Monday, September 14, 2026
spot_imgspot_img
spot_imgspot_img

ಬೈಕ್ ಗಳ ನಡುವೆ ಪರಸ್ಪರ ಡಿಕ್ಕಿ; ಕನ್ಯಾನದ ಯುವಕ ದಾರುಣ ಸಾವು!

- Advertisement -
- Advertisement -

ಬದಿಯಡ್ಕ: ಬೈಕ್ ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕೊಲ್ಲಿ ಉದ್ಯೊಗಿ ಮೃತಪಟ್ಟ ಘಟನೆ ಬದಿಯಡ್ಕದಲ್ಲಿ ನಡೆದಿದೆ.

ಬೈಕ್ ನಲ್ಲಿ ಸಂಚರಿಸುತ್ತಿದ್ದ ಮತ್ತೋರ್ವ ಪ್ರಯಾಣಿಕನಿಗೆ ಗಂಭೀರ ಗಾಯಗೊಂಡಿದೆ. ನಿನ್ನೆ ರಾತ್ರಿ ಬದಿಯಡ್ಕ ಸಮೀಪದ ಪಿಲಾಂಕ ಟೈ ಎಂಬಲ್ಲಿ ಅಪಘಾತ ಉಂಟಾಗಿದ್ದು, ಅಪಘಾತದಲ್ಲಿ ಕನ್ಯಾನದ ರಜಾಕ್ (23) ಎಂಬವರು ಮೃತಪಟ್ಟಿದ್ದಾರೆ.

ಬೈಕಿನಲ್ಲಿ ಸಂಚರಿಸುತ್ತಿದ್ದ ಕುಂಬ್ಡಾಜೆಯ ಸಂಜೀವ ಎಂಬವರು ಗಂಭೀರ ಗಾಯಗೊಂಡಿದ್ದು ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

- Advertisement -

Related news

error: Content is protected !!