Thursday, July 23, 2026
spot_imgspot_img
spot_imgspot_img

ಕಾರಿನಲ್ಲಿ MDMA ಸಾಗಾಟ: ಇಬ್ಬರ ಬಂಧನ-₹39 ಸಾವಿರ ಮೌಲ್ಯದ ಮಾದಕವಸ್ತು ಹಾಗೂ ಕಾರು ವಶ

- Advertisement -
- Advertisement -

ಬೆಳ್ತಂಗಡಿ: ನಿಷೇಧಿತ MDMA ಮಾದಕವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವೇಣೂರು ಪೊಲೀಸರು ಬಂಧಿಸಿರುವ ಘಟನೆ ಮೇ 27 ರಂದು ನಡೆದಿದೆ.ವೇಣೂರು ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಅಕ್ಷಯ್ ಡವಗಿರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಠಾಣಾ ಸಿಬ್ಬಂದಿಗಳೊಂದಿಗೆ ಗುರುವಾಯನಕೆರೆ-ಮೂಡಬಿದ್ರೆ ರಸ್ತೆಯ ಕಂಬಳದಡ್ಡ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ KA 13 P 2905 ಸಂಖ್ಯೆಯ ಕಾರನ್ನು ತಪಾಸಣೆ ನಡೆಸಿದಾಗ, ಕಾರಿನಲ್ಲಿ ಅಕ್ರಮವಾಗಿ MDMA ಮಾದಕವಸ್ತು ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು.

ಬಂಧಿತ ಆರೋಪಿಗಳನ್ನು ಮಂಗಳೂರು ಮಿಜಾರು ನಿವಾಸಿ ಮಹಮ್ಮದ್ ತಹ್ನವೀರ್ (27) ಹಾಗೂ ಮೂಡಬಿದ್ರೆ ನಿವಾಸಿ ಮಹಮ್ಮದ್ ಸಲ್ವಾನ್ (22) ಎಂದು ಗುರುತಿಸಲಾಗಿದೆ.

ಪೊಲೀಸರು ಆರೋಪಿಗಳಿಂದ ಅಂದಾಜು ₹39,200 ಮೌಲ್ಯದ ಸುಮಾರು 3.92 ಗ್ರಾಂ ತೂಕದ MDMA ಮಾದಕವಸ್ತು ವಶಪಡಿಸಿಕೊಂಡಿದ್ದು, ಕೃತ್ಯಕ್ಕೆ ಬಳಸಿದ ಕಾರನ್ನೂ ಜಪ್ತಿ ಮಾಡಿದ್ದಾರೆ.ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 41/2026, ಕಲಂ 8(c), 22(b) NDPS Act ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!