Wednesday, September 2, 2026
spot_imgspot_img
spot_imgspot_img

400 ಕೆವಿ ಉಡುಪಿ ಕಾಸರಗೋಡು ಯೋಜನೆಯನ್ನು ಸ್ಥಳಾಂತರಿಸಲು ಶಾಸಕ ಸಂಜೀವ ಮಠಂದೂರು ರವರಿಂದ ಇಂಧನ ಸಚಿವರಿಗೆ ಮನವಿ

- Advertisement -
- Advertisement -
driving

400 ಕೆವಿ ಉಡುಪಿ ಕಾಸರಗೋಡು ಯೋಜನೆಯು ಬಂಟ್ವಾಳ ತಾಲೂಕಿನ 17 ಗ್ರಾಮಗಳಲ್ಲಿ ಹಾದು ಹೋಗುತ್ತದೆ. ವಿಟ್ಲ ಭಾಗದ ರೈತರ ಕೃಷಿ ಭೂಮಿಯಲ್ಲಿ ಹಾದು ಹೋಗುವುದರಿಂದ ರೈತರ ಕೃಷಿ ಭೂಮಿ ನಾಶವಾಗಿ ಆರ್ಥಿಕ ಸಂಕಷ್ಟ ಉಂಟಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡದೆ ವಿವಿಧ ಕಡೆ ಸರ್ವೆ ಕಾರ್ಯವನ್ನು ಕೃಷಿ ಜಮೀನಿನಲ್ಲಿ ನಡೆಸುತ್ತಿದ್ದಾರೆ.

ಆದ್ದರಿಂದ 400 ಕೆವಿ ಉಡುಪಿ ಕಾಸರಗೋಡು ವಿದ್ಯುತ್ ಮಾರ್ಗವನ್ನು ಕೃಷಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮಾರ್ಗ ಬದಲಾವಣೆ ಮಾಡುವಂತೆ ಮಾನ್ಯ ಪುತ್ತೂರು ವಿಧಾನಸಭಾ ಶಾಸಕರಾದ ಸಂಜೀವ ಮಠಂದೂರು ರವರು ಇಂಧನ ಸಚಿವರು ಸುನೀಲ್ ಕುಮಾರ್ ರವರಿಗೆ ಮನವಿ ಮಾಡಿದರು.

- Advertisement -

Related news

error: Content is protected !!