Sunday, August 9, 2026
spot_imgspot_img
spot_imgspot_img

45 ಪಿಸ್ತೂಲ್‌ ಹೊಂದಿದ್ದ ಭಾರತೀಯ ದಂಪತಿ; ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನ

- Advertisement -
- Advertisement -

ನವದೆಹಲಿ: 45 ಪಿಸ್ತೂಲ್‌ಗಳನ್ನು ಹೊಂದಿ ವಿಯೆಟ್ನಾಂನಿಂದ ಭಾರತಕ್ಕೆ ಆಗಮಿಸಿದ ದಂಪತಿಯನ್ನು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿರುವ ಘಟನೆ ಬುಧವಾರ ನಡೆದಿದೆ.

ಬಂಧಿತರನ್ನು ಜಗಜಿತ್ ಸಿಂಗ್ ಮತ್ತು ಜಸ್ವಿಂದರ್ ಕೌರ್ ದಂಪತಿ ಎಂದು ಗುರುತಿಸಲಾಗಿದೆ. ಇಬ್ಬರೂ ವಿಯೆಟ್ನಾಂನಿಂದ ಭಾರತಕ್ಕೆ ಹಿಂತಿರುಗಿದ್ದರು. ಎರಡು ಟ್ರೋಲಿ ಬ್ಯಾಗ್‌ಗಳಲ್ಲಿ 22.5 ಲಕ್ಷ ರೂ. ಮೌಲ್ಯದ 45 ಪಿಸ್ತೂಲ್‌ಗಳನ್ನು ತುಂಬಿಸಿಕೊಂಡಿದ್ದರು. ಇದು ನಿಜವಾದ ಗನ್ ಹೌದೋ ಅಲ್ಲವೋ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪ್ರಾಥಮಿಕ ವರದಿ ಪ್ರಕಾರ ಪೂರ್ಣಪ್ರಮಾಣದಲ್ಲಿ ಬಳಕೆಯ ಸಾಮರ್ಥ್ಯವನ್ನು ಇವು ಹೊಂದಿದೆ ಎಂಬುದು ಗೊತ್ತಾಗಿದೆ.

ಭಯೋತ್ಪಾದಕ ನಿಗ್ರಹದ ರಾಷ್ಟ್ರೀಯ ಭದ್ರತಾ ಪಡೆ (ಎನ್ ಎಸ್ ಜಿ)ಯು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.

- Advertisement -

Related news

error: Content is protected !!