- Advertisement -
- Advertisement -


ಪುತ್ತೂರು: ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರದ ಆಶ್ರಯದಲ್ಲಿ, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ಉಮಾಮಹೇಶ್ವರ ಸೇವಾ ವಿಶ್ವಸ್ಥ ಮಂಡಳಿಯ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಭಜನಾ ತರಬೇತಿ ಕಮ್ಮಟ ಆಯೋಜಿಸಲಾಗಿದೆ.
ಅಕ್ಟೋಬರ್ 2, 3 ಮತ್ತು 4ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಶ್ರೀ ಉಮಾಮಹೇಶ್ವರ ಸಭಾಂಗಣದಲ್ಲಿ ತರಬೇತಿ ನಡೆಯಲಿದೆ.

8 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳು, ಅಣ್ಣಂದಿರು ಹಾಗೂ ಅಕ್ಕಂದಿರು ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿದೆ.

ಕಮ್ಮಟದಲ್ಲಿ ಭಜನಾ ಪದಗಳ ಅಭ್ಯಾಸ, ತಾಳ-ಲಯ ಹಾಗೂ ಸಂಗೀತದ ಮೂಲಭೂತ ಅಂಶಗಳು, ಸಮೂಹ ಭಜನಾ ಅಭ್ಯಾಸ ಮತ್ತು ಭಕ್ತಿಯ ಸಂದೇಶ ಹಾಗೂ ಸಾಹಿತ್ಯ ಪರಿಚಯದ ಕುರಿತು ತರಬೇತಿ ನೀಡಲಾಗುತ್ತದೆ.
“ಬನ್ನಿ ಕಲಿಯೋಣ… ಭಕ್ತಿಯ ಲೋಕದಲ್ಲಿ ಹಾರೋಣ…” ಎಂಬ ಸಂದೇಶದೊಂದಿಗೆ ಭಕ್ತಾಭಿಮಾನಿಗಳು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
- Advertisement -








