Wednesday, July 22, 2026
spot_imgspot_img
spot_imgspot_img

ವಿಟ್ಲ: ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ ವಿಟ್ಲ ವಲಯ ಇದರ 15 ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಸಂಘದ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

- Advertisement -
- Advertisement -

ಸಂಘದ ನೂತನ ಅಧ್ಯಕ್ಷರಾಗಿ ಹರೀಶ್ ಎಸ್ ಪಿ ಆಯ್ಕೆ

ವಿಟ್ಲ: ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ ವಿಟ್ಲ ವಲಯ ಇದರ 15 ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಸಂಘದ 2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾರತ ಸೇವಾಶ್ರಮ ಕನ್ಯಾನ, ದೇಲಂತಬೆಟ್ಟು ಇಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಸುಧೀರ್ ಕೋಟ್ಯಾನ್ ಸಭಾದ್ಯಕ್ಷತೆ ವಹಿಸಿದ್ದರು. ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕನ್ಯಾನ ಪಂಚಾಯತ್ ಮಾಜಿ ಅಧ್ಯಕ್ಷ ರಘುರಾಮ ಶೆಟ್ಟಿ, ಮಂಗಳೂರು ಎಂ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷ ರಶೀದ್ ಎಸ್ ಎಂ ವಿಟ್ಲ, ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, vtv ವಿಟ್ಲ ಇದರ ಆಡಳಿತ ನಿರ್ದೇಶಕ ರಾಮದಾಸ್ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಶೆಟ್ಟಿ ಇವರು ಭಾಗವಹಿಸಿದ್ದರು.

ಸಂಘದ ನೂತನ ಅಧ್ಯಕ್ಷ ಹರೀಶ್ ಎಸ್ ಪಿ, ಉಪಾಧ್ಯಕ್ಷ ರಿಯಾಝ್ ಗಡಿಯಾರ, ಕಾರ್ಯದರ್ಶಿ ಸುರೇಶ್ ಕುದ್ದುಪದವು, ಜತೆ ಕಾರ್ಯದರ್ಶಿ ಸತೀಶ್ ಪೆರುವಾಯಿ, ಕೋಶಾಧಿಕಾರಿ ಪ್ರಶಾಂತ್ ಉಕ್ಕುಡ, ನಿಕಟ ಪೂರ್ವ ಉಪಾಧ್ಯಕ್ಷ ಇಸ್ಮಾಯಿಲ್, ಜತೆಕಾರ್ಯದರ್ಶಿ ಅಶ್ಪಕ್ ಉಕ್ಕುಡ, ಕೋಶಾಧಿಕಾರಿ ಜಯಪ್ರಕಾಶ್ ವರಪ್ಪಾದೆ, ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಆಶ್ರಮವಾಸಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ಮತ್ತು ಸುಮಾರು 300 ಆಶ್ರಮ ವಾಸಿಗಳಿಗೆ ಮಧ್ಯಾಹ್ನದ ಭೋಜನ ನೀಡಲಾಯಿತು.

ಮಾಜಿ ಅಧ್ಯಕ್ಷ ಉದಯಕುಮಾರ್ ದಂಬೆ ಸ್ವಾಗತಿಸಿದರು. ಕಾರ್ಯದರ್ಶಿ ರವಿ ಪೂಜಾರಿ ವಿಟ್ಲ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು. ಸಂಜೀವ ಪೂಜಾರಿ ಎಂ ಎಸ್ ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!