- Advertisement -
- Advertisement -



ಬಂಟ್ವಾಳ : ವೈಬ್ ಫ್ರೆಂಡ್ಸ್, ದಕ್ಷಿಣ ಕನ್ನಡ ಜಿಲ್ಲಾ ತಂಡದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪುತ್ತೂರಿನ ಪ್ರಜ್ಞಾ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ವಿಶೇಷ ಚೇತನ ಮಕ್ಕಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಿ, ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ವೈಬ್ ಫ್ರೆಂಡ್ಸ್ ಅಧ್ಯಕ್ಷ ಸಿದ್ಧೀಕ್ ಸೂರ್ಯ, ಪ್ರಧಾನ ಕಾರ್ಯದರ್ಶಿ ಶಾಕಿರ್ (ಚೆಕ್ಕಿ) ಅಳಕೆ ಮಜಲು, ಮಾಧ್ಯಮ ಹಾಗೂ ಪ್ರಚಾರ ಸಮಿತಿ ಕಾರ್ಯದರ್ಶಿ ಶಾಫಿ ಸೂರ್ಯ, ಉಪಾಧ್ಯಕ್ಷ ಅಶ್ರಫ್ ಮೈಕೆ ಹಾಗೂ ಕ್ರೀಡಾ ಕಾರ್ಯದರ್ಶಿ ಅಬ್ಬಾಸ್ ಮೈಕೆ. ಕಾರ್ಯಕಾರಣಿ ಸದಸ್ಯ ಹಾರಿಸ್ ಜನಪ್ರಿಯ ಮಿತ್ತೂರು ಮೊದಲಾದವರು ಉಪಸ್ಥಿತರಿದ್ದರು.
- Advertisement -








