Sunday, August 23, 2026
spot_imgspot_img
spot_imgspot_img

ಹರೀಶ್ ಮಾಂಬಾಡಿಗೆ ಸಾಧನಾಶ್ರೀ ಪ್ರಶಸ್ತಿ ಪ್ರದಾನ

- Advertisement -
- Advertisement -

ವಿಟ್ಲ : ಮಡಂತ್ಯಾರಿನ ಕಲಾಸಭಾಂಗಣದಲ್ಲಿ ಭಾನುವಾರ ಮಡಂತ್ಯಾರು ಜೇಸಿಐ ಆಯೋಜಿಸಿದ್ದ ಜೇಸಿಐ ವಲಯ 15ರ ‘ಮೃದಿನಿ’ ಹೆಸರಿನ ವ್ಯವಹಾರ, ಬೆಳವಣಿಗೆ ಹಾಗೂ ಅಭಿವೃದ್ಧಿ ಸಮ್ಮೇಳನ-2026ರಲ್ಲಿ ಹಿರಿಯ ಪತ್ರಕರ್ತ ಹಾಗೂ ಜೇಸಿಐ ಜೋಡುಮಾರ್ಗ ನೇತ್ರಾವತಿ ಸದಸ್ಯ ಹರೀಶ್ ಮಾಂಬಾಡಿ ಅವರಿಗೆ ‘ಸಾಧನಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜೇಸಿಐ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ, ವಲಯದ ಪದಾಧಿಕಾರಿಗಳಾದ ರಂಜಿತ್ ಎಚ್.ಡಿ., ಸುಹಾಸ್ ಮರಿಕೆ, ಗಾಯತ್ರಿ ಲೋಕೇಶ್, ವಿಘ್ನೇಶ್ ಪ್ರಸಾದ್ ರಾವ್, ಕಾಶಿನಾಥ್ ಗೋಗಟೆ, ಜೇಸಿಐ ಜೋಡುಮಾರ್ಗ ನೇತ್ರಾವತಿ ಪೂರ್ವಾಧ್ಯಕ್ಷ ಪಿ. ಮಹಮ್ಮದ್, ಅಧ್ಯಕ್ಷೆ ಕೀರ್ತಿ ಸತೀಶ್, ಮಡಂತ್ಯಾರು ಜೇಸಿಐ ಅಧ್ಯಕ್ಷೆ ಸಾಯಿಸುಮ ನಾವಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

- Advertisement -

Related news

error: Content is protected !!