Monday, September 28, 2026
spot_imgspot_img
spot_imgspot_img

ಅ.1ರಿಂದ ಗೃಹಬಳಕೆಯ ಇಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಯೇರಿಕೆ ಶೇ.8ರವರೆಗೆ ಹೆಚ್ಚಳ ಸಾಧ್ಯತೆ

- Advertisement -
- Advertisement -

ಹೊಸದಿಲ್ಲಿ: ಹವಾ ನಿಯಂತ್ರಕಗಳು, ವಾಶಿಂಗ್ ಮೆಶೀನ್‌ಗಳು, ರೆಫ್ರಿಜರೇಟರ್‌ಗಳು ಹಾಗೂ ಎಲ್‌ಇಡಿ ಟಿವಿಗಳು ಸೇರಿದಂತೆ ಇಲೆಕ್ಟ್ರಾನಿಕ್ ವಸ್ತುಗಳು ಆಕ್ಟೋಬರ್ 1ರಿಂದ ದುಬಾರಿಯಾಗಲಿದ್ದು ಶೇ.8ರವರೆಗೆ ಬೆಲೆಯೇರಿಕೆಯಾಗಲಿದೆ. 2026ರಲ್ಲಿ ಗೃಹಬಳಕೆ ಉಪಕರಣಗಳ ಉದ್ಯಮವು ಬೆಲೆ ಏರಿಕೆ ಮಾಡಿರುವುದು ಇದು ಮೂರನೇ ಸಲವಾಗಿದೆ. ನಿರ್ದಿಷ್ಟವಾಗಿ ತಾಮ್ರ, ಆಲ್ಯುಮೀನಿಯಂ, ಉಕ್ಕು ಹಾಗೂ ಕಚ್ಚಾ ತೈಲ ಉತ್ಪನ್ನಗಳು ಸೇರಿದಂತೆ ಗಗನಕ್ಕೇರುತ್ತಿರುವ ಸಾಮಾಗ್ರಿ ವೆಚ್ಚ ಸರಕುಸಾಗಣೆ ದರ ಹೆಚ್ಚಳ ಹಾಗೂ ಪಶ್ಚಿಮ ಬಿಕ್ಕಟ್ಟಿನಿಂದಾಗಿ ಕರೆನ್ಸಿ ಮೌಲ್ಯದಲ್ಲಿ ವ್ಯಾಪಕ ಸ್ಥಿತ್ಯಂತರಗಳಿಂದಾಗಿ, ಬೆಲೆಏರಿಕೆ ಅನಿವಾರ್ಯವಾಗಿದೆ ಎಂದು ತಯಾರಕ ಸಂಸ್ಥೆಗಳು ಹೇಳಿಕೊಂಡಿವೆ.ಏರ್‌ಕಂಡೀಶನರ್‌ಗಳು ಅತ್ಯಧಿಕ ಬೆಲೆಯೇರಿಕೆಯನ್ನು ಕಂಡಿದ್ದು, ಶೇ.5ರಿಂದ ಶೇ.8ರಷ್ಟು ಹೆಚ್ಚಳವಾಗಿದೆ.

ತಾಮ್ರದ ದರದಲ್ಲಿ ಪ್ರತಿ ಮೆಟ್ರಿಕ್ ಟನ್‌ಗೆ 9 ಸಾವಿರ ಡಾಲರ್‌ಗಳಿಂದ 14,500 ಡಾಲರ್‌ವರೆಗೆ ಏರಿಕೆಯಾಗಿದೆ.ರೆಫ್ರಿಜರೇಟರ್‌ಗಳು ಹಾಗೂ ವಾಶಿಂಗ್ ಮೆಶಿನ್‌ಗಳು ಸೇರಿದಂತೆ ಇತರ ಪ್ರಮುಖ ಗೃಹ ಬಳಕೆಯ ಇಲೆಕ್ಟ್ರಾನಿಕ್ ಉಪಕರಣಗಳ ದರಗಳಲ್ಲಿ ಶೇ.3ರಿಂದ ಶೇ.4ರವರೆಗೆ ಹೆಚ್ಚಳವಾಗಲಿದೆ. ಪೂರೈಕೆ ಸರಪಣಿಯಲ್ಲಿನ ವ್ಯತ್ಯಯಗಳಿಂದಾಗಿ ಟೆಲಿವಿಶನ್‌ಗಳ ದರಗಳಲ್ಲಿಯೂ ಭಾರೀ ಏರಿಕೆಯಾಗಿದೆ. ಸಣ್ಣ ಗಾತ್ರದ ಪರದೆಯ ಟಿವಿ ಸೆಟ್‌ಗಳ ದರಗಳು ಶೇ.20ರಷ್ಟು ಹಾಗೂ ದೊಡ್ಡಗಾತ್ರದ ಪರದೆಯ ಟಿವಿ ಮಾಡೆಲ್‌ಗಳ ದರಗಳಲ್ಲಿ ಶೇ.10ರಷ್ಟು ಹೆಚ್ಚಳವಾಗಲಿದೆ.ಪ್ರಮುಖ ಇಲೆಕ್ಟ್ರಾನಿಕ್ ಬ್ರಾಂಡ್‌ಗಳಾದ ಡೈಕಿನ್, ಬ್ಲೂಸ್ಟಾರ್, ಎಲ್‌ಐ, ಬಾಶ್ ಹಾಗೂ ಗೋಡ್ರೆಜ್, ಈಗಾಗಲೇ ತಮ್ಮ ಇಲೆಕ್ಟ್ರಾನಿಕ್ ಉತ್ಪನ್ನಗಳ ದರವನ್ನು ಪರಿಷ್ಕರಿಸಿವೆ.ಇಲೆಕ್ಟ್ರಾನಿಕ್ ಉತ್ಪನ್ನಗಳ ವಾರ್ಷಿಕ ಮಾರಾಟದ ಶೇ.30-ಶೇ.40ರಷ್ಟು ಸಾಂಪ್ರದಾಯಿಕವಾಗಿ ಓಣಂನಿಂದ ದೀಪಾವಳಿವರೆಗಿನ ಹಬ್ಬದ ಋತುವಿನಲ್ಲೇ ನಡೆಯುವುದರಿಂದ, ಈ ಅವಧಿಯಲ್ಲಿ ಬೆಲೆಯೇರಿಕೆಯಾಗುತ್ತಿರುವುದು ತಯಾರಕರಿಗೆ ಸತ್ವ ಪರೀಕ್ಷೆಯಾಗಿ ಪರಿಣಮಿಸಿದೆ. ಆಕ್ಟೋಬರ್‌ನಲ್ಲಿ ಬೆಲೆಯೇರಿಕೆಯಾಗಲಿದ್ದರೂ, ಡೀಲರ್‌ಗಳು ಹಾಗೂ ವಿತರಕರು ಬೆಲೆಯೇರಿಕೆಗೆ ಮೊದಲೇ ಸಾಕಷ್ಟು ಇಲೆಕ್ಟ್ರಾನಿಕ್ ಉಪಕರಣಗಳನ್ನು ದಾಸ್ತಾನು ಮಾಡಿಕೊಂಡಿರುವುದರಿಂದ ದೀಪಾವಳಿ ಸಂದರ್ಭದಲ್ಲೂ ಗ್ರಾಹಕರಿಗೆ ಹಿಂದಿನ ದರದಲ್ಲೇ ಉತ್ಪನ್ನಗಳು ದೊರೆಯುವ ಸಾಧ್ಯತೆಯಿದೆ.

- Advertisement -

Related news

error: Content is protected !!