Tuesday, May 7, 2024
spot_imgspot_img
spot_imgspot_img

5G ಲಾಂಚ್​ಗೆ ಕೆಲವೇ ದಿನ ಮೊದಲು 6G ಬಗ್ಗೆ ಮಹತ್ವದ ಮಾಹಿತಿ ನೀಡಿದ ಪ್ರಧಾನಿ ನರೇಂದ್ರ ಮೋದಿ

- Advertisement -G L Acharya panikkar
- Advertisement -

ದೆಹಲಿ: ಭಾರತದಲ್ಲಿ 5G ಸೇವೆಗಳನ್ನು ಆರಂಭವಾಗಲು ದಿನಗಣನೆ ಆರಂಭವಾಗಿದೆ. ಏರ್​ಟೆಲ್ ಮತ್ತು ಜಿಯೊ ಕಂಪನಿಗಳು 5ಜಿ ಸೇವೆ ಒದಗಿಸಲು ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಪ್ರಾಯೋಗಿಕ ಪರೀಕ್ಷೆಗಳು ಪೂರ್ಣಗೊಂಡಿವೆ. ಜನರು ಕಾತರದಿಂದ 5ಜಿ ಸಾಮರ್ಥ್ಯದ ಫೋನ್​ಗಳನ್ನು ಅಮೆಜಾನ್, ಫ್ಲಿಪ್​ಕಾರ್ಟ್​ಗಳಲ್ಲಿ ತಡಕಾಡುತ್ತಿದ್ದಾರೆ. ಮೊಬೈಲ್​ ಹ್ಯಾಂಡ್​ಸೆಟ್ ಮಾಡುವ ಶೋರೂಂಗಳಲ್ಲಿಯೂ ‘ಈ ಫೋನ್​ನಲ್ಲಿ 5ಜಿ ಬರುತ್ತಾ’ ಎನ್ನುವ ಪ್ರಶ್ನೆಯನ್ನು ಗ್ರಾಹಕರು ತೀರಾ ಸಾಮಾನ್ಯ ಎನ್ನುವಂತೆ ಕೇಳುತ್ತಿದ್ದಾರೆ. ದೇಶದ ಜನರು ಕಾತರದಿಂದ ಕಾಯುತ್ತಿರುವ 5ಜಿ ತಂತ್ರಜ್ಞಾನ ವ್ಯಾಪಿಸಿಕೊಳ್ಳುವ ಕೆಲವೇ ವಾರಗಳು ಮೊದಲು ಪ್ರಧಾನಿ ನರೇಂದ್ರ ಮೋದಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 6ಜಿ ಬಗ್ಗೆ ಮಾತನಾಡಿದ್ದಾರೆ. ಅವರು ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದ್ದು, ಗೇಮಿಂಗ್​ ಮತ್ತು ಟೆಲಿಕಾಂ ಕಂಪನಿಗಳ ಬಗ್ಗೆ ಹೂಡಿಕೆದಾರರು ಮತ್ತಷ್ಟು ಆಸಕ್ತಿ ತೋರುವಂತೆ ಮಾಡಿದೆ.

ಕೇಂದ್ರ ಸರ್ಕಾರವು ಇದೇ ದಶಕದ ಅಂತ್ಯಕ್ಕೆ, ಅಂದರೆ 2030ರ ಒಳಗೆ ದೇಶದಲ್ಲಿ 6ಜಿ ಸೇವೆಗಳನ್ನು ಲಭ್ಯಗೊಳಿಸಲು ಬೇಕಿರುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಗತ್ಯ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ (ಆಗಸ್ಟ್ 25) ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022’ ಕಾರ್ಯಕ್ರಮದ ಫೈನಲ್ಸ್​ನಲ್ಲಿ ಹೇಳಿದ್ದರು. ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದ ಅವರು, ‘ಪ್ರತಿದಿನ ಹಲವು ಹೊಸ ಕ್ಷೇತ್ರಗಳು ಸವಾಲುಗಳು ನಮ್ಮೆದುರು ಬರುತ್ತಿವೆ. ಇವಕ್ಕೆ ಹೊಸ ರೀತಿಯ ಪರಿಹಾರಗಳನ್ನೇ ನಾವು ಹುಡುಕಿಕೊಳ್ಳಬೇಕಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹುಡುಕಿ’ ಎಂದು ಅವರು ಸ್ಪರ್ಧಿಗಳಿಗೆ ಕೋರಿದ್ದರು.

‘ಹೊಸ ತಲೆಮಾರಿನ ಯುವಕರು ಕೃಷಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಡ್ರೋಣ್ ಬಳಕೆ ಹೆಚ್ಚಿಸಲು ಶ್ರಮಿಸಬೇಕು. ಇದೇ ದಶಕದ ಅಂತ್ಯದಲ್ಲಿ 6ಜಿ ತಂತ್ರಜ್ಞಾನ ಕಾರ್ಯಾರಂಭ ಮಾಡಲು ಭಾರತ ಸರ್ಕಾರ ಶ್ರಮಿಸುತ್ತಿದೆ. ಭಾರತೀಯ ಉದ್ಯಮಿಗಳು ಗೇಮಿಂಗ್ ಮತ್ತು ಮನರಂಜನಾ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಕೊಳ್ಳಲು ನಾವು ಉತ್ತೇಚಿಸುತ್ತಿದ್ದೇವೆ. ಭಾರತ ಸರ್ಕಾರವು ತಂತ್ರಜ್ಞಾನದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸುತ್ತಿದೆ. ಇದರ ಲಾಭವನ್ನು ಯುವಕರು ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಪ್ರತಿ ಹಳ್ಳಿಯನ್ನು ಆಪ್ಟಿಕಲ್ ಫೈಬರ್​ನಿಂದ ಬೆಸೆಯುವ ಪ್ರಯತ್ನಗಳು ಆರಂಭವಾಗಿವೆ. 5ಜಿ ತಂತ್ರಜ್ಞಾನವು ದೇಶದ ಹಲವೆಡೆ ಲಭ್ಯವಾಗಲಿದೆ. ಭಾರತೀಯರು ಈ ಅವಕಾಶಗಳ ಲಾಭ ಪಡೆದುಕೊಳ್ಳಬೇಕು. ಗೇಮಿಂಗ್​ಗೆ ಪೂರಕ ವಾತಾವರಣ ರೂಪಿಸಬೇಕು ಎಂದರು. ಭಾರತದಲ್ಲಿ ನವೋದ್ಯಮ ಮತ್ತು ಆವಿಷ್ಕಾರಗಳಿಗೆ ಪೂರಕ ವಾತಾವರಣ ನಿರ್ಮಿಸಬೇಕಿದೆ. ಸಾಮಾಜಿಕ ಮತ್ತು ಸಾಂಸ್ಥಿಕ ಬೆಂಬಲ ನಮಗೆ ಅಗತ್ಯವಿದೆ. ಜನರು ಹೊಸ ವಿಚಾರಗಳನ್ನು ಒಪ್ಪಿಕೊಳ್ಳಬೇಕು ಮತ್ತು ಸ್ವಂತ ಆಲೋಚನೆಗಳನ್ನು ಗೌರವಿಸಬೇಕು ಎಂದು ಹೇಳಿದರು.

ಅಕ್ಟೋಬರ್ 12ರಿಂದ 5ಜಿ ಸೇವೆ

ಭಾರತದಲ್ಲಿ 5ಜಿ ಸೇವೆಗಳು ಅಕ್ಟೋಬರ್ 12ರಿಂದ ಆರಂಭವಾಗಲಿದೆ. ಇನ್ನೊಂದು ವರ್ಷದಲ್ಲಿ ದೇಶದ ಮೂಲೆಮೂಲೆಗಳಲ್ಲಿ 5ಜಿ ತಂತ್ರಜ್ಞಾನ ಲಭ್ಯವಾಗಿದ್ದು, ಜನರ ಕೈಗೆಟುಕುವ ಬೆಲೆಯಲ್ಲಿ 5ಜಿ ಲಭ್ಯವಾಗಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಬೆಂಗಳೂರು, ಅಹಮದಾಬಾದ್, ಛತ್ತೀಸಗಡ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್​ನಗರ್, ಕೊಲ್ಕತ್ತಾ, ಲಖನೌ, ಮುಂಬೈ ಮತ್ತು ಪುಣೆ ನಗರಗಳಲ್ಲಿ 5ಜಿ ಸೇವೆಗಳು ಲಭ್ಯವಾಗಲಿವೆ.

- Advertisement -

Related news

error: Content is protected !!