Tuesday, May 7, 2024
spot_imgspot_img
spot_imgspot_img

ಶಿಕ್ಷಕರ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಂಡ 6 ವರ್ಷದ ಬಾಲಕ

- Advertisement -G L Acharya panikkar
- Advertisement -
vtv vitla
vtv vitla
vtv vitla

ಶಿಕ್ಷಕರ ನಿರ್ಲಕ್ಷ್ಯದಿಂದ 6 ವರ್ಷದ ಬಾಲಕನೊಬ್ಬ ಒಂದು ಕಳೆದುಕೊಂಡ ಅಮಾನವೀಯ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದಿದೆ. ಚೌಡಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ಎಡಗಣ್ಣು ಕಳೆದುಕೊಂಡ ದುರ್ದೈವಿ.

ಚೌಡಾಪುರದ ಸರ್ಕಾರಿ ಶಾಲೆಯಲ್ಲಿ ಶಾಲೆಯಲ್ಲಿ 300 ಮಕ್ಕಳಿದ್ದಾರೆ. ಮಕ್ಕಳಿಗೆ ಸರಿಯಾಗಿ ಶಿಕ್ಷಕರು ಪಾಠ ಮಾಡುತ್ತಿಲ್ಲ ಎನ್ನುವ ಆರೋಪ ಇದೆ. ಹೀಗಿರುವಾಗ ಶಿಕ್ಷಕರ ಬದಲಿಗೆ ಶಾಲೆಯಲ್ಲಿ ಮತ್ತೊಂದು ಮಗುವಿಗೆ ಶಾಲೆಯ ಜವಾಬ್ದಾರಿ ಹೊರಿಸಿ, ಮಕ್ಕಳು ಗಲಾಟೆ ಮಾಡದಂತೆ ನೋಡಿಕೊಳ್ಳುವಂತೆ ಹೇಳಿದ್ದಾರೆ. ಆಗ ಪ್ರಜ್ವಲ್ ಸೇರಿದಂತೆ ಉಳಿದ ಮಕ್ಕಳು ಗಲಾಟೆ ಮಾಡಿದ್ದಾರೆ.

ಶಾಲೆಯ ಜವಾಬ್ದಾರಿ ಹೊತ್ತ ಹುಡುಗ, ಕೈಯಲ್ಲಿ ಹಿಡಿದ ಕಡ್ಡಿ ಎಸೆದಿದ್ದಾನೆ. ಅದು ನೇರವಾಗಿ ವಿದ್ಯಾರ್ಥಿ ಪ್ರಜ್ವಲ್ ಕಣ್ಣಿಗೆ ಬಿದ್ದಿದೆ. ಪರಿಣಾಮ ಪ್ರಜ್ವಲ್‌ನ ಕಣ್ಣು ಗುಡ್ಡೆ ಸಂಪೂರ್ಣ ಹಾಳಾಗಿ ಕಣ್ಣು ಕುರುಡಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಿದ ವೈದ್ಯರು ಮಗುವಿಗೆ ಕಣ್ಣಿನ ದೃಷ್ಟಿ ಮರಳಿ ಬರುವುದಿಲ್ಲ ಎಂದಿದ್ದಾರೆ.

ಮಗನ ಕಣ್ಣು ಹೋಗಲು ಶಿಕ್ಷಕರಾದ ಸುಭಾಷಪ್ಪ ಗೊರವರ್, ಶಶಿಕುಮಾರ್ ಮತ್ತು ರವಿ ನಿರ್ಲಕ್ಷವೇ ಕಾರಣ ಅಂತ ಬಾಲಕನ ಪ್ರಜ್ವಲ್ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಫ್ ಐಆರ್ ದಾಖಲಿಸಿಕೊಂಡಿರುವ ಕಾನಾಹೊಸಳ್ಳಿ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

suvarna gold
- Advertisement -

Related news

error: Content is protected !!