Sunday, June 29, 2025
spot_imgspot_img
spot_imgspot_img

ಕಂಠಪೂರ್ತಿ ಕುಡಿದು ಬೈಕ್ ನಿಲ್ಲಿಸಿ ರಸ್ತೆಯಲ್ಲಿ ಮಲಗಿದ; ಆಂಬ್ಯುಲೆನ್ಸ್ ಸೈರನ್‌ಗೆ ಎದ್ದು ಕುಳಿತ ಭೂಪ

- Advertisement -
- Advertisement -

ಕುಡಿದು ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ಬೈಕ್ ಓಡಿಸಲಾಗದೆ ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ ನಡು ರಸ್ತೆಯಲ್ಲೇ ಮಲಗಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಾಸನದಿಂದ ಸಂಬಂಧಿಕರ ಮನೆಗೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮಕ್ಕೆ ಬರುತ್ತಿದ್ದ ವೇಳೆ ವಿಪರೀತ ಮದ್ಯಪಾನ ಮಾಡಿದ ವ್ಯಕ್ತಿಗೆ ಬೈಕ್ ಓಡಿಸಲು ಸಾಧ್ಯವಾಗಿಲ್ಲ. ಪರಿಣಾಮ ಬಣಕಲ್ ಸಮೀಪದ ಹೆದ್ದಾರಿಯಲ್ಲಿ ಬೈಕ್‌ ನಿಲ್ಲಿಸಿ ವ್ಯಕ್ತಿ ರಸ್ತೆ ಮಧ್ಯೆ ಮಲಗಿದ್ದಾನೆ. ಈ ರಸ್ತೆಯಲ್ಲಿ ಹೋಗುತ್ತಿದ್ದ ಸವಾರೊಬ್ಬರು ಅಪಘಾತವಾಗಿರಬಹುದೆಂದು ಭಾವಿಸಿ ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಸೈರನ್‌ದೊಂದಿಗೆ ಆಂಬ್ಯುಲೆನ್ಸ್ ಸ್ಥಳಕ್ಕೆ ಬರುತ್ತಿದ್ದಂತೆ ಎಚ್ಚರಗೊಂಡ ವ್ಯಕ್ತಿ ಮದ್ಯಪಾನ ಮಾಡಿದ್ದರಿಂದ ಬೈಕ್ ಓಡಿಸಲಾಗದೆ ರಸ್ತೆಯಲ್ಲಿ ಮಲಗಿದ್ದೇ ಎಂದು ತಿಳಿಸಿ ಸ್ಥಳದಿಂದ ತೆರಳಿದ್ದಾನೆ.

- Advertisement -

Related news

error: Content is protected !!