Sunday, June 7, 2026
spot_imgspot_img
spot_imgspot_img

ಮಂಗಳೂರು: ಬಸ್ಸಿನಲ್ಲಿ ಸದ್ದಿಲ್ಲದೆ ಮಹಿಳೆಯ ಕರಿಮಣಿ ಸರ ಎಗರಿಸಿದ ಚಾಲಾಕಿ ಕಳ್ಳಿಯರು.!

- Advertisement -
- Advertisement -

ಮಂಗಳೂರು: ಗಮನ ಬೇರೆಡೆ ಸೆಳೆದು ಮಹಿಳೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರ ಎಗರಿಸಿದ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿದೆ.
ಸರ ಕಳೆದುಕೊಂಡವರನ್ನು ಭಾಗೀರಥಿ ಎಂದು ಗುರುತಿಸಲಾಗಿದೆ.

ಅವರು ತಮ್ಮ ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ಹೋಗಿಬರುವಾಗ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು. ಆಗ ಮೂವರು ಮಹಿಳೆಯರು ಆಗಮಿಸಿದರು. ಅದರಲ್ಲಿ ಓರ್ವಳು ಭಾಗೀರಥಿ ಅವರ ಬಳಿ ಕುಳಿತುಕೊಂಡು ಹಣವನ್ನು ಕೆಳಗೆ ಬೀಳಿಸಿ ‘ಹಣ ಬಿದ್ದಿದೆ’ ಎಂದು ಗಮನವನ್ನು ಬೇರೆಡೆ ಸೆಳೆದು ಅವರ ಗಮನಕ್ಕೆ ಬಾರದಂತೆ ಕುತ್ತಿಗೆಯಲ್ಲಿದ್ದ ಸುಮಾರು 4 ಪವನ್ ತೂಕದ ಸುಮಾರು 1.28 ಲ.ರೂ. ಮೌಲ್ಯದ ಕರಿಮಣಿ ಸರ ಕಳವು ಮಾಡಿದ್ದಾಳೆ. ಎಂದು ಬರ್ಕೆ ಪೊಲೀಸರಿಗೆ ದೂರು ನೀಡಲಾಗಿದೆ.

- Advertisement -

Related news

error: Content is protected !!