Sunday, June 7, 2026
spot_imgspot_img
spot_imgspot_img

ವಾಕಿಂಗ್ ಮಾಡುತ್ತಿದ್ದ ವೃದ್ದೆಗೆ ಕಾರು ಡಿಕ್ಕಿ..!

- Advertisement -
- Advertisement -

ವಾಕಿಂಗ್ ಮಾಡುತ್ತಿದ್ದ ವೇಳೆ ಅಜ್ಜಿ ಮತ್ತು ಮೊಮ್ಮಕ್ಕಳಿಗೆ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಕಲ್ಯಾಣ ನಗರದ ಚಳ್ಳಿಕೆರೆಯಲ್ಲಿ ನಡೆದಿದೆ.

ಗಾಯಗೊಂಡ ವೃದ್ದೆ ಶೀಲಾ (60) ಎಂದು ಗುರುತಿಸಲಾಗಿದೆ.

ಕಾರು ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಈ ಘಟನೆ ಸಂಭವಿಸಿದ್ದು , ಅಜ್ಜಿ ಜೊತೆ ಇದ್ದ ಮೊಮ್ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಡಿದ ಮತ್ತಿನಲ್ಲಿ ಚಾಲಕ ಕಾರು ಚಲಾಯಿಸುತ್ತಿದ್ದು, ಚಾಲಕ ವೃದ್ಧೆಗೆ ಮಾತ್ರವಲ್ಲ ನಂತರ ರಸ್ತೆ ಬದಿ ನಿಂತಿದ್ದ ಬೈಕ್ ಗೆ ಬಳಿಕ ಕಂಪೌಂಡ್ ಗೆ ಡಿಕ್ಕಿ ಹೊಡೆದಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಬಾಣಸವಾಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!