Friday, June 19, 2026
spot_imgspot_img
spot_imgspot_img

ಕುಕ್ಕೆ ಸುಬ್ರಹ್ಮಣ್ಯದ ಸರ್ಪ ಸಂಸ್ಕಾರ ಕ್ರಿಯಾಕರ್ತ ನೇಣಿಗೆ ಶರಣು.!

- Advertisement -
- Advertisement -

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಸರ್ಪ ಸಂಸ್ಕಾರ ಕ್ರಿಯಾ ಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣ ಮಯ್ಯ ಭಟ್ (55) ಗುರುವಾರ ಸಂಜೆ ವೇಳೆ ನೇಣಿಗೆ ಶರಣಾಗಿದ್ದಾರೆ.

ಉಪ್ಪಿನಂಗಡಿ ನಾಳ ನಿವಾಸಿಯಾದ ಕೃಷ್ಣ ಮಯ್ಯ ಭಟ್ ಕಳೆದ ಐದು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸರ್ಪಸಂಸ್ಕಾರ ಕ್ರಿಯಾಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದರು.ಸುಬ್ರಹ್ಮಣ್ಯಕ್ಕೆ ಸಮೀಪದ ಕುಲ್ಕುಂದ ಎಂಬಲ್ಲಿ ಬಾಡಿಗೆ ಕೊಠಡಿಯಲ್ಲಿದ್ದರು. 

ಗುರುವಾರ ತಾನು ವಾಸವಿದ್ದ ಬಾಡಿಗೆ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ.ಘಟನಾ ಸ್ಥಳಕ್ಕೆ ಕುಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!