Thursday, June 25, 2026
spot_imgspot_img
spot_imgspot_img

ಯೋಗಿ ಆದಿತ್ಯನಾಥ್ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ ಮಿಥುನ್​​ ರೈ ವಿರುದ್ಧ ದೂರು ದಾಖಲು.!

- Advertisement -
- Advertisement -

ಪುತ್ತೂರು : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್​ ಅಧ್ಯಕ್ಷ ಮಿಥುನ್ ರೈ ವಿರುದ್ಧ ದೂರು ದಾಖಲಾಗಿದೆ.

ಪುತ್ತೂರು ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರ ಕಟ್ಟೆ,ಮಿಥುನ್ ರೈ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ,ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಯೋಗಿ ಆದಿತ್ಯನಾಥ್ ಹಿಂದೂ ಧರ್ಮದ ಹಾಗೂ ನಾಥ ಪಂಥದ ಗುರುವಾಗಿದ್ದು, ಸ್ವಾಮೀಜಿ  ವಿರುದ್ಧ ಮಿಥುನ್ ರೈ ಅವಹೇಳನಕಾರಿಯಾಗಿ ಮಾತನಾಡಿರುವುದು ಹಿಂದೂ ಧರ್ಮದ ಅನುಯಾಯಿಗಳ ಭಾವನೆಗೆ ಧಕ್ಕೆಯಾಗಿದೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.

ಮಂಗಳೂರಿನ ತೊಕ್ಕೋಟಿನಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಿಥುನ್ ರೈ ಮಾತನಾಡಿದ್ದರು.ಯೋಗಿ ಆದಿತ್ಯನಾಥ ಒಬ್ಬ ಗಂಡಸಾ, ಆವ ಓರ್ವ ಅಯೋಗ್ಯ, ಅವ ಒಬ್ಬ ಹಿಂದೂ ಎಂದು ಹೇಳಲು ನಾಚಿಕೆಯಾಗುತ್ತದೆ. ಆತ ಕರ್ನಾಟಕ ಹಾಗೂ ದಕ್ಷಿಣ ಕನ್ನಡಕ್ಕೆ ಬಂದರೆ ಆತನ ಮುಖಕ್ಕೆ ಮಸಿ ಬಳಿಯುವುದಾಗಿ ಹೇಳಿಕೆ ನೀಡಿದ್ದರು.

- Advertisement -

Related news

error: Content is protected !!