Monday, July 27, 2026
spot_imgspot_img
spot_imgspot_img

ಕಾಡಾನೆಯೊಂದಿಗೆ ಕಾದಾಟ; ‘ರಾಜೇಂದ್ರ’ ಸಾವು.

- Advertisement -
- Advertisement -


ಗೋಣಿಕೊಪ್ಪಲು (ಕೊಡಗು): ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಕಾಡಾನೆ ದಾಳಿಯಿಂದ ರಾಜೇಂದ್ರ (56) ಹೆಸರಿನ ಗಂಡಾನೆ ಮೃತಪಟ್ಟಿದೆ.


ಮೇವಿಗೆ ಬಿಟ್ಟ ಆನೆ ಕಾಡಾನೆಯೊಂದಿಗೆ ಕಾದಾಟ ನಡೆಸಿ ಹೊಟ್ಟೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿತ್ತು. ಶಿಬಿರಕ್ಕೆ ಕರೆ ತಂದು ಚಿಕಿತ್ಸೆ ನೀಡಲಾಗಿತ್ತು. ಅದಕ್ಕೆ ಸ್ಪಂದಿಸದೆ ತೀವ್ರ ಅಸ್ವಸ್ಥಗೊಂಡ ಆನೆಯು ಗುರುವಾರ (ಅ.15) ಮೃತಪಟ್ಟಿದೆ ಎಂದು ಶಿಬಿರದ ವಲಯ ಅರಣ್ಯಾಧಿಕಾರಿ ವೈ.ಕೆ.ಕಿರಣ್ ಕುಮಾರ್ ತಿಳಿಸಿದ್ದಾರೆ.


1990ರಲ್ಲಿ ಸೋಮವಾರಪೇಟೆ ವಲಯದ ಯಡವನಾಡು ಅರಣ್ಯದಲ್ಲಿ ಈ ಆನೆಯನ್ನು ಸೆರೆ ಹಿಡಿಯಲಾಗಿತ್ತು. 30 ವರ್ಷಗಳ ಕಾಲ ಶಿಬಿರದಲ್ಲಿದ್ದ ಆನೆ ಅಭಿಮನ್ಯುವನ್ನು ಬಿಟ್ಟರೆ, ಇತರೆ ಆನೆಗಳಿಗೆ ನಾಯಕನಂತಿತ್ತು ಎಂದು ಶಿಬಿರದ ಮಾವುತರು ಹೇಳಿದ್ದಾರೆ.

- Advertisement -

Related news

error: Content is protected !!