Thursday, July 30, 2026
spot_imgspot_img
spot_imgspot_img

ಸುರತ್ಕಲ್: ಬೈಕ್ ಗಳ ನಡುವೆ ಅಪಘಾತ: ಓರ್ವ ಸಾವು; ನಾಲ್ವರಿಗೆ ಗಾಯ

- Advertisement -
- Advertisement -

ಸುರತ್ಕಲ್: ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿ, ನಾಲ್ಕು ಜನ ಗಾಯಗೊಂಡ ಘಟನೆ ಸುರತ್ಕಲ್ ಎಂಆರ್ ಪಿಎಲ್ ರಸ್ತೆಯ ಕಾನ ಕಟ್ಲ ಸೀತಾ ಕಾಂಪೌಂ ಡ್ ಬಳಿಯ ಮಿಲ್ಕ್ ಪಾರ್ಲರ್ ಸಮೀಪ ನಡೆದಿದೆ.

ಕಾನ ಗಣೇಶ್ ಬೀಡಿ ಸಮೀಪದ ನಿವಾಸಿ ಯಶೋಧರ (23) ಮೃತ ದುರ್ದೈವಿ.

ಘಟನೆಯಲ್ಲಿ ಮೃತಪಟ್ಟವರ ಬೈಕ್ ನ ಹಿಂಬದಿ ಸವಾರ ಕಾನ ಕಟ್ಟೆ ಬಳಿಯ ನಿವಾಸಿ ಕಿಶೋರ್(18) ಅವರಿಗೆ ಗಾಯವಾಗಿದೆ. ಜೊತೆಗೆ ಇನ್ನೊಂದು ಬೈಕ್‌ನಲ್ಲಿ ಸಂಚರಿಸುತ್ತಿದ್ದ ಕೇರಳ ನಿವಾಸಿಗಳು ಹಾಗೂ ಮುಕ್ಕ ಕಾಲೇಜೊಂದರ ವಿದ್ಯಾರ್ಥಿಗಳಾದ ಅಮನ್(21), ಮುಹಮ್ಮದ್ ಆದಿಲ್(21), ಮುಹಮ್ಮದ್ ತಫಾದ್(21) ಎಂಬವರಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತ ಯಶೋಧರ ಹಾಗೂ ಕಿಶೋರ್ ಅವರು ಲೈಟಿಂಗ್ ಕೆಲಸ ಮುಗಿಸಿ ಬರುತ್ತಿದ್ದರು. ಇವರಿಬ್ಬರು ಸಂಚರಿಸುತ್ತಿದ್ದ ಬೈಕ್ ಗೆ ಒಂದೇ ಬೈಕ್ ನಲ್ಲಿ ಮೂವರು ಸಂಚರಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

- Advertisement -

Related news

error: Content is protected !!