ವಿಟ್ಲ: ಅಳಕಮಜಲು ಸಮೀಪದ ನಿನ್ನಿಕಲ್ಲು ಗುಡ್ಡದಲ್ಲಿ ಮುಸ್ಲಿಂ ಯುವಕರೊಂದಿಗೆ ಹಿಂದೂ ಅಪ್ರಾಪ್ತ ಹುಡುಗಿ ಪತ್ತೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಎರಡು ಮುಸ್ಲಿಂ ಯುವಕರು, ಒಬ್ಬಳು ಮುಸ್ಲಿಂ ಯುವತಿ ಹಾಗೂ ಹಿಂದೂ ಅಪ್ರಾಪ್ತ ಹುಡುಗಿ ನಿನ್ನಿ ಕಲ್ಲು ಎಂಬಲ್ಲಿ ಸ್ಥಳೀಯರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿದೆ.
ಹಿಂದೂ ಹೆಣ್ಣುಮಗಳ ಪೋಷಕರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ..?
ಕಬಕ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ಸರಕಾರದ ವತಿಯಿಂದ ನಡೆಸುವ ಕಂಪ್ಯೂಟರ್ ಶಿಕ್ಷಣ ಪಡೆಯಲು ತೆರಳಿದ್ದು ಹಿಂದೂ ಹುಡುಗಿಯನ್ನು ಅಲ್ಲಿಂದ ಇಬ್ಬರು ಯುವಕರಾದ ಮಹಮ್ಮದ್ ಶಾಕೀರ್ ಮತ್ತು ಅಪ್ರಾಪ್ತ ಬಾಲಕನೋರ್ವ ಪುಸಲಾಯಿಸಿ ಅಪಹರಣ ಮಾಡಿದ್ದಾರೆ. ಇಡ್ಕಿದು ಗ್ರಾಮದ ನಿನ್ನಿಕಲ್ಲು ಎಂಬಲ್ಲಿಗೆ ಯಾವುದೋ ಉದ್ದೇಶದಿಂದ ಕರೆದುಕೊಂಡು ಹೋಗಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ವಿಚಾರವನ್ನು ಮಗಳು ಸಂಜೆ 5.30 ಗಂಟೆಗೆ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಪೋಷಕರು ನಿನ್ನಿಕಲ್ಲು ಎಂಬಲ್ಲಿನ ಎತ್ತರದ ಗುಡ್ಡ ಪ್ರದೇಶದ ಕಡೆಗೆ ಹೋಗಿ ನೋಡಿದಾಗ ಅಲ್ಲಿ ಇಬ್ಬರು ಹುಡುಗರು ಇರುವುದನ್ನು ಕಂಡು ತನ್ನ ಮಗಳನ್ನು ಹೆಸರು ಕೂಗಿ ಕರೆದಾಗ ಅವರಿಬ್ಬರು ಅಲ್ಲಿಂದ ಓಡಿ ಹೋಗಿರುತ್ತಾರೆ. ನಂತರ ಮಗಳನ್ನು ಮನೆಗೆ ಕರೆದುಕೊಂಡು ಹೋಗಿ ಈ ಬಗ್ಗೆ ಸಮಾಲೋಚನೆ ನಡೆಸಿ ದೂರು ನೀಡಿದ್ದಾಗಿ ಉಲ್ಲೇಖವಾಗಿದೆ.

- ಹೈಕೋರ್ಟ್ಗೆ ಸಲ್ಲಿಕೆಯಾದ ರಿಟ್ ಅರ್ಜಿಯಲ್ಲಿ ಹೆಸರು ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ‘ಎಕ್ಸ್’ ಮೂಲಕ ಸ್ಪಷ್ಟನೆ ನೀಡಿದ ನಟ
- ತಮಿಳುನಾಡು ಸಿಎಂ ವಿಜಯ್ಗೆ ಕಪ್ಪು ಬಾವುಟ ಪ್ರದರ್ಶಿಸಲು ಯತ್ನ: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ
- ರೋಹಿಣಿ ಸಿಂಧೂರಿ–ರೂಪಾ ಮೌದ್ಗಿಲ್ ಮಾನನಷ್ಟ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆಮಧ್ಯಸ್ಥಿಕೆಗೆ ನಿವೃತ್ತ ನ್ಯಾ. ಕುರಿಯನ್ ಜೋಸೆಫ್ ರನ್ನು ನೇಮಿಸಿದ ಸುಪ್ರೀಂ ಕೋರ್ಟ್
- ಕೃಷಿ ಗ್ರೇಡ್ ಯೂರಿಯಾವನ್ನು ಅಕ್ರಮವಾಗಿ ಮರುಪೊಟ್ಟಣಿಕೆ; 632 ಚೀಲ ಜಪ್ತಿ, ಪ್ರಕರಣ ದಾಖಲು
- ಮಾವಿನ ಹಣ್ಣು ಸೇವಿಸಿ ಅಸ್ವಸ್ಥ: ಬೀದರ್ ಮೂಲದ ಇಬ್ಬರು ಸಹೋದರಿಯರು ಅನುಮಾನಾಸ್ಪದ ಸಾವು











