Friday, June 5, 2026
spot_imgspot_img
spot_imgspot_img

ವಿಟ್ಲ : ವಿಠಲ ಪದವಿಪೂರ್ವ ಕಾಲೇಜು ವಿಟ್ಲ 97.45% ದಾಖಲೆಯ ಫಲಿತಾಂಶ :

- Advertisement -
- Advertisement -

ವಿಟ್ಲ : ವಿಠಲ ಪದವಿಪೂರ್ವ ಕಾಲೇಜು ವಿಟ್ಲದಲ್ಲಿ ದ್ವಿತೀಯ ಪಿಯುಸಿ 97.45% ಫಲಿತಾಂಶದೊಂದಿಗೆ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 98 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 30 ವಿಶಿಷ್ಟ ಶ್ರೇಣಿ, 57 ಪ್ರಥಮ ಶ್ರೇಣಿ, 7 ದ್ವಿತೀಯ ಶ್ರೇಣಿ ಹೀಗೆ ಒಟ್ಟು 94 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.9 ಫಲಿತಾಂಶ ಬಂದಿರುತ್ತದೆ. ಕುಮಾರಿ ಕೃಪಾ ಎನ್ 581 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.

ವಾಣಿಜ್ಯ ವಿಭಾಗದಲ್ಲಿ 134 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 18 ವಿಶಿಷ್ಟ ಶ್ರೇಣಿ, 99 ಪ್ರಥಮ ಶ್ರೇಣಿ ಹಾಗೂ 16 ದ್ವಿತೀಯ ಶ್ರೇಣಿ ಹೀಗೆ 132 ವಿದ್ಯಾರ್ಥಿಗಳು ಉತ್ತೀರ್ಣರಾಗಿ 98.5% ಫಲಿತಾಂಶ ಬಂದಿರುತ್ತದೆ. ಕುಮಾರಿ ಶ್ರೀರಂಜಿನಿ 568 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.

ಕಲಾ ವಿಭಾಗದಲ್ಲಿ 43 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 4 ವಿಶಿಷ್ಟ ಶ್ರೇಣಿ, 25 ಪ್ರಥಮ ಶ್ರೇಣಿ ಮತ್ತು 10 ದ್ವಿತೀಯ ಶ್ರೇಣಿ ಹೀಗೆ ಒಟ್ಟು 42 ವಿದ್ಯಾರ್ಥಿಗಳು ಉತ್ತೀರ್ಣರಾಗಿ 97.5% ಫಲಿತಾಂಶ ಬಂದಿರುತ್ತದೆ. ಕುಮಾರಿ ಅಶ್ವಿನಿ 550 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.

ಸಂಸ್ಥೆಯಿಂದ ಒಟ್ಟು 274 ವಿದ್ಯಾರ್ಥಿಗಳು ಹಾಜರಾಗಿ 52 ವಿಶಿಷ್ಟ ಶ್ರೇಣಿ, 181 ಪ್ರಥಮ ಶ್ರೇಣಿ, 33 ದ್ವಿತೀಯ ಶ್ರೇಣಿಯೊಂದಿಗೆ 268 ವಿದ್ಯಾರ್ಥಿಗಳು ಉತ್ತೀರ್ಣರಾಗಿ 97.45% ದಾಖಲೆಯ ಫಲಿತಾಂಶ ಬಂದಿರುವುದು ಸಂತಸ ತಂದಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ..

- Advertisement -

Related news

error: Content is protected !!