Monday, June 8, 2026
spot_imgspot_img
spot_imgspot_img

ಕುಂದಾಪುರ: ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ; ಮಹಿಳೆ ಸಾವು..!

- Advertisement -
- Advertisement -

ಕುಂದಾಪುರ: ಮನೆಗೆ ಹಾಲು ಕೊಟ್ಟು ವಾಪಾಸು ಹೆದ್ದಾರಿ ದಾಟಿ ಬರುತ್ತಿದ್ದ ಮಹಿಳೆಗೆ ಬುಲೆಟ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಸಾವನ್ನಪ್ಪಿದ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾವುಂದ ಮಸ್ಕಿ ಮಹಾಗಣಪತಿ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆ ನಾವುಂದ ನಿವಾಸಿ ಶಾಂತಾ (53) ಎಂದು ಗುರುತಿಸಲಾಗಿದೆ.

ಶಾಂತಾ ಇಲ್ಲಿನ ಶಕುಂತಲಾ ಎಂಬುವರ ಮನೆಗೆ ಹಾಲು ಕೊಟ್ಟು ಡಿವೈಡರ್ ದಾಟಿ ನಡೆದುಕೊಂಡು ಹೋಗುತ್ತಿದ್ದರು. ಇರ್ಫಾನ್ ಎಂಬಾತ ಹಿಮಾಲಯ ಬುಲೆಟ್ ನಲ್ಲಿ ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ಇಬ್ಬರೂ ರಸ್ತೆಗೆ ಬಿದ್ದಿದ್ದು, ಶಾಂತಾ ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಸಾವನ್ನಪ್ಪಿದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!