Tuesday, June 9, 2026
spot_imgspot_img
spot_imgspot_img

ಮಂಗಳೂರು: ಸೆಲೂನ್ ಮಾಲಕನಿಗೆ ಚೂರಿ ಇರಿತ ಪ್ರಕರಣ; ಆರೋಪಿ ಅರೆಸ್ಟ್..!

- Advertisement -
- Advertisement -

ಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಸೆಲೂನ್ ಮಾಲಕನಿಗೆ ಚೂರಿಯಿಂದ ಇರಿದು ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಬರೀಮಾರದ ಆನಂದ ಸಪಲ್ಯ (49) ಎಂದು ಗುರುತಿಸಲಾಗಿದೆ.

ಬೋಳಾರದ ಕಾಂತಿ ಹೇರ್ ಡ್ರೆಸ್ಸಸ್ ನ ಮಾಲಕ ಎಡ್ವಿನ್ ವಿನಯ್ ಕುಮಾರ್ (65) ಅವರಿಗೆ ಚೂರಿಯಿಂದ ಇರಿದ ಘಟನೆ ನಗರದ ಬೋಳಾರದ ಸರಕಾರಿ ಶಾಲೆಯ ಬಳಿ ಶನಿವಾರ ಸಂಜೆ ನಡೆದಿತ್ತು. ಮದ್ಯ ಸೇವಿಸಿದ ಅಮಲಿನಲ್ಲಿದ್ದ ಆರೋಪಿ ಆನಂದ ಸಪಲ್ಯ ಸಮೀಪದಲ್ಲೇ ಇರುವ ತನ್ನ ಮನೆಯಿಂದ ಚೂರಿ ತಂದು ಎಡ್ವಿನ್‌ ಅವರ ಎದೆಗೆ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!