Saturday, June 28, 2025
spot_imgspot_img
spot_imgspot_img

ಕಾಸರಗೋಡು : ಲಾರಿ-ಬೈಕ್ ನಡುವೆ ಅಪಘಾತ; ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು..!

- Advertisement -
- Advertisement -

ಕಾಸರಗೋಡು: ಲಾರಿ ಮತ್ತು ಬೈಕ್ ನಡುವೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಮೃತ ಯುವಕನನ್ನು ಕುಂಬಳೆ ಸಮೀಪದ ಬಂಬ್ರಾಣ ಅಂಡಿತ್ತಡ್ಕ ದ ಯೂಸಫ್ ಕೈಫ್ (19) ಎಂದು ಗುರುತಿಸಲಾಗಿದೆ.

ಮಂಗಳೂರಿನ ಕಾಲೇಜುವೊಂದರ ವಿದ್ಯಾರ್ಥಿಯಾಗಿದ್ದ ಕೈಫ್ ನಾಲ್ಕು ದಿನಗಳ ಹಿಂದೆ ಬೈಕ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಉಪ್ಪಳ ಸಮೀಪದ ಕುಕ್ಕಾರ್ ಎಂಬಲ್ಲಿ ಅಪಘಾತ ನಡೆದಿತ್ತು. ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಈತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!