Wednesday, July 22, 2026
spot_imgspot_img
spot_imgspot_img

ಮಂಗಳೂರು: ನಗ್ನವಾಗಿದ್ದ ವ್ಯಕ್ತಿಯಿಂದ ವಾಹನಗಳಿಗೆ ಕಲ್ಲೆಸೆತ

- Advertisement -
- Advertisement -

ಮಂಗಳೂರು: ವಿವಸ್ತ್ರವಾಗಿದ್ದ ವ್ಯಕ್ತಿಯೋರ್ವ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲೆಸೆಯುತ್ತಿದ್ದ ಘಟನೆ ಕಲ್ಲಾಪು ತೋಕೂರು ರೈಲ್ವೆ ಗೇಟ್ ಬಳಿ ನಡೆದಿದೆ.

ರೈಲ್ವೇ ಗೇಟ್ ಬಿದ್ದ ಕಾರಣ ರೈಲ್ವೆ ಕ್ರಾಸಿಂಗ್ ಬಳಿ ವಾಹನ ಸವಾರರು ಕಾಯುತ್ತಿದ್ದರು ಈ ಸಂದರ್ಭದಲ್ಲಿ ವ್ಯಕ್ತಿ ಕಲ್ಲೆಸೆಯುತ್ತಿದ್ದರಿಂದ ಬೈಕ್ ಸವಾರನೊಬ್ಬ ಭಯಗೊಂಡು ಬೈಕ್ ಬಿಟ್ಟು ಇಳಿದಿದ್ದಾರೆ. ಸವಾರನು ಹೆಲ್ಮೆಟ್ ಧರಿಸಿದ ಕಾರಣದಿಂದಾಗಿ ಕಲ್ಲೇಟಿನಿಂದ ಯಾವುದೇ ಗಾಯಗೊಂಡಿಲ್ಲ ಎಂದು ವರದಿಯಾಗಿದೆ. ಈ ವೇಳೆ ವಾಹನ ಸವಾರರು 112 ಸಂಖ್ಯೆಗೆ ಕರೆ ಮಾಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ನಗ್ನವಾಗಿದ್ದ ವ್ಯಕ್ತಿಯು ತುಳು ಭಾಷೆಯಲ್ಲಿ ಮಾತನಾಡುತ್ತಿದ್ದು, ಮಾದಕ ವ್ಯಸನಿ ಅಥವಾ ಮಾನಸಿಕ ಅಸ್ವಸ್ಥನಾಗಿರುವುದಾಗಿ ಶಂಕಿಸಲಾಗಿದೆ. ಈತನು ಮದ್ಯವಯಸ್ಕನಾಗಿದ್ದು ಬ್ಯಾಗ್ ವೊಂದನ್ನು ಧರಿಸಿಕೊಂಡಿದ್ದನು

- Advertisement -

Related news

error: Content is protected !!