Monday, July 27, 2026
spot_imgspot_img
spot_imgspot_img

ಶತಕದ ಗಡಿ ದಾಟಿದ್ದಈರುಳ್ಳಿ ದರದಲ್ಲಿ ಗಣನೀಯ ಇಳಿಕೆ

- Advertisement -
- Advertisement -

ಬೆಂಗಳೂರು(ಅ.26): ಶತಕದ ಗಡಿ ದಾಟಿ ಕೆಜಿಗೆ 120 ರಿಂದ 130 ರೂ.ವರೆಗೂ ಮಾರಾಟವಾಗಿದ್ದ ಈರುಳ್ಳಿ ದರದಲ್ಲಿ ಗಣನೀಯ ಇಳಿಕೆಯಾಗಿದೆ. ದಾಸ್ತಾನು ಮಾಡಲಾಗಿದ್ದ ಈರುಳ್ಳಿ ಮಾರುಕಟ್ಟೆಗೆ ಬಂದ ಪರಿಣಾಮ ಈರುಳ್ಳಿ ಬೆಲೆ ಕಡಿಮೆಯಾಗಿದೆ.

ಶತಕದ ಗಡಿ ದಾಟಿದ್ದ ಈರುಳ್ಳಿ ದರ ಕೇಳಿ ಗ್ರಾಹಕರು ಕಂಗಾಲಾಗಿದ್ದರು. ಎರಡು ದಿನಗಳಿಂದ ಬೆಲೆ ಕಡಿಮೆಯಾಗತೊಡಗಿದ್ದು, ಸಗಟು ದರದಲ್ಲಿ ಗುಣಮಟ್ಟದ ಈರುಳ್ಳಿ ಕೆಜಿಗೆ 90 ರೂಪಾಯಿಯಿಂದ 60 ರೂಪಾಯಿವರೆಗೆ ಇಳಿಕೆಯಾಗಿದೆ.

ಕೇಂದ್ರ ಸರ್ಕಾರ ಈರುಳ್ಳಿ ದಾಸ್ತಾನು ಮೇಲೆ ಮಿತಿ ಹೇರಿ ನಿಗಾ ವಹಿಸುವುದಾಗಿ ಎಚ್ಚರಿಕೆ ನೀಡಿತ್ತು. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬಂದಿದೆ. ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಳೆ ಹಾಳಾಗಿದೆ. ಉಳಿದ ಹೊಸ ಬೆಳೆ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ.

- Advertisement -

Related news

error: Content is protected !!