- Advertisement -
- Advertisement -



ಬ್ರಹ್ಮಾವರ: ಕಪ್ಪೆ ಚಿಪ್ಪು ತೆಗೆಯಲು ಹೊಳೆಗೆ ಹೋದ ವ್ಯಕ್ತಿ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಬ್ರಹ್ಮಾವರದ ಸಾಸ್ತಾನದ ಕೋಡಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಸಾಸ್ತಾನ ಯಕ್ಷಿಮಠ ನಿವಾಸಿ ರಾಜು ಮರಕಾಲ (66) ಎಂದು ಗುರುತಿಸಲಾಗಿದೆ.
ರಾಜು ಮರಕಾಲ ಅವರು ಶುಕ್ರವಾರ ಸಂಜೆ ಹೊಳೆಯಲ್ಲಿ ಕಪ್ಪೆ ಚಿಪ್ಪು ತೆಗೆಯಲೆಂದು ಹೋಗಿದ್ದರು. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಕಾಣೆಯಾಗಿದ್ದರು. ಬೆಳಿಗ್ಗೆ ಸಾಸ್ತಾನ ಕೋಡಿ ಹೊಳೆಯಲ್ಲಿ ಸ್ಥಳೀಯರು ತೇಲುತ್ತಿರುವ ಶವವೊಂದನ್ನು ಗಮನಿಸಿದ್ದಾರೆ.
ತಕ್ಷಣ ಕೋಟ ಪೊಲೀಸ್ ಠಾಣೆಗೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್‌ಗೆ ಮಾಹಿತಿ ರವಾನಿಸಲಾಗಿದೆ. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಕೋಟ ಪೊಲೀಸ್ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








