


ಪುತ್ತೂರು: ರಾಜ್ಯ ಸರಕಾರ ಭ್ರಷ್ಟಾಚಾರ ಮಾಡುತ್ತಿದೆ ಮತ್ತು ಕಾಂಗ್ರೆಸ್ ನಾಯಕರಿಂದ ರಾಜ್ಯಪಾಲರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಬಿಜೆಪಿ ಯುವಮೋರ್ಚಾ ಘಟಕ ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲದ ನೇತೃತ್ವದಲ್ಲಿ ರಾಜ್ಯ ಸರಕಾರದ ವಿರುದ್ಧ ಆ.28ರಂದು ಸಂಜೆ ಪುತ್ತೂರು ದರ್ಬೆ ವೃತ್ತದ ಬಳಿ ಪ್ರತಿಭಟನೆ ನಡೆಯಿತು.
ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿಯವರು ಮಾತನಾಡಿ ಭ್ರಷ್ಟಾಚಾರದಿಂದ ತುಂಬಿದ ಕಾಂಗ್ರೆಸ್ ಒಂದೇ ಒಂದು ಅಭಿವೃದ್ಧಿ ಮಾಡಲಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ.
ಕಾಂಗ್ರೆಸ್ ಇವತ್ತು ಆನೆ ನಡೆದದ್ದೆ ದಾರಿ ಎಂಬ ಮನಸ್ಥಿತಿಗೆ ಬಂದಿದೆ. ಐವನ್ ಡಿ ಸೋಜ, ಜಮೀರ್, ಕೃಷ್ಣಬೈರೆ ಗೌಡರು ನಮ್ಮ ರಾಜ್ಯಪಾಲರಿಗೆ ರಾಷ್ಟ್ರಪತಿಗಳಿಗೆ ಅವಹೇಳನಕಾರಿ ಮಾತನಾಡಿದರೂ ಅವರ ಮೇಲೆ ಕೇಸು ದಾಖಲಿಸುವುದಿಲ್ಲ. ನಾವು ಪ್ರತಿಭಟನೆ ಮಾಡಿದರೆ ನಮ್ಮ ಮೇಲೆ ತಕ್ಷಣ ಕೇಸ್ ಹಾಕಿಸುವ ಮೂಲಕ ಪೊಲೀಸ್ ಪೋರ್ಸ್ ನ್ನು ಮಿಸ್ ಯೂಸ್ ಮಾಡುತ್ತಿದ್ದಾರೆ.ಪೊಲೀಸರು ಕಾಂಗ್ರೆಸ್ ನ ಕೈಗೊಂಬೆಯಾಗಿದ್ದಾರೆ.ಸಂಘರ್ಷದಿಂದ ಹುಟ್ಟಿದ ಪಕ್ಷ ನಮ್ಮದು. ಈಗ ನಾವು ಟ್ರೈಲರ್ ಮಾತ್ರ ತೋರಿಸಿದ್ದೇವೆ. ಮುಂದೆ ದೊಡ್ಡ ಮಟ್ಟದ ನಿಮ್ಮ ಮನೆ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದರು.
ಯುವ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ ಹೆಮ್ಮಾರ್ ಪ್ರಾಸ್ತಾವಿಕ ಮಾತಾನಾಡಿ ಹಗರಣದಲ್ಲಿ ತೊಡಗಿಸಿಕೊಂಡ ಸರಕಾರ ಸಿದ್ದರಾಮಯ್ಯ ಸರಕಾರ, ಜನರನ್ನು ಬೀದಿಗೆ ತಂದ ಕೀರ್ತಿ ಕಾಂಗ್ರೆಸ್ ಸರಕಾರಕ್ಕೆ ಕಣ್ಣಿಗೆ ಮಣ್ಣೆರೆಚುವ ವ್ಯವಸ್ಥೆಯೇ ಈ ಸುಳ್ಳು ಗ್ಯಾರಂಟಿಗಳಾಗಿವೆ ಈ ಗ್ಯಾರಂಟಿಯಿಂದ ಸರಕಾರದ ಖಜಾನೆ ಖಾಲಿಯಾಗಿದೆ, ನಾಲ್ಕು ಸಾವಿರ ಕೋಟಿ ದೋಚಿದ್ದು ಕಾಂಗ್ರೆಸ್ ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಆರ್ ಸಿ ನಾರಾಯಣ್, ಮಾಜಿ ಶಾಸಕರಾದ ಸಂಜೀವ ಮಠಂದೂರು, ಗ್ರಾಮಾಂತರ ಮಂಡಲದ ನಿಯೋಜಿತ ಅಧ್ಯಕ್ಷ ದಯಾನಂದ ಶೆಟ್ಟಿ, ಸುನೀಲ್ ದಡ್ಡು ನಿಯೋಜಿತ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಯುವಮೋರ್ಚ ನಗರಾಧ್ಯಕ್ಷ ನಿತೀಶ್ ನಗರ, ಬಿಜೆಪಿ ಮುಖಂಡ ನಿತೇಶ ಶಾಂತಿವನ, ಮುರಳಿಕೃಷ್ಣ ಹಸಂತಡ್ಕ, ಪಿ ಜಿ ಜಗನ್ನಿವಾಸ್,ವಿರೂಪಾಕ್ಷ ಮಚ್ಚಿನಲೆ, ನಾಗೇಶ್ ಪ್ರಭು, ಅರುಣ್ ಪುತ್ತಿಲ, ಹರಿಪ್ರಸಾದ್ ಯಾದವ್, ಕಿರಣ್ ಪೆರ್ನೆ,ಶ್ರೀಕೃಷ್ಣ ವಿಟ್ಲ ಪುನೀತ್ ಮಾಡತ್ತಾರು ಕಾರ್ಯಕರ್ತರು ಉಪಸ್ಥಿತರಿದ್ದರು.








