







ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಸರಕಾರಿ ಪ್ರೌಢ ಶಾಲೆ ಮಣಿಕ್ಕರ ಇವರ ಸಹಯೋಗದೊಂದಿಗೆ ಪುತ್ತೂರು ತಾಲೂಕು ಮಟ್ಟದ ಪ್ರೌಢ ಶಾಲಾ ವಿಭಾಗದ ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾಟ ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ನಡೆಯಿತು.
ಈ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪುತ್ತೂರು ಪಾಂಗ್ಲಯಿ ಬೆಥನಿ ಆಂಗ್ಲ ಮಾದ್ಯಮ ಪ್ರೌಢ ಶಾಲೆಯು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಈ ಪಂದ್ಯಾಟದಲ್ಲಿ ಉತ್ತಮ ಅಟ್ಯಾಕರ್ ಆಗಿ ಬೆಥನಿ ಶಾಲೆಯ ಹನಿನ್ , ಉತ್ತಮ ಪಾಸರ್ ಆಗಿ ಬೆಥನಿಯ ಮಹಮ್ಮದ್ ಶಾನ್ ಪ್ರಶಸ್ತಿಗಳನ್ನು ಪಡೆದರು.
ತಂಡದ ಆಟಗಾರರಾದ ಲೂತ್, ಹನೀನ್, ಸವಾದ್, ರಿಫಾನ್, ಶಾಹಜದ್, ಶಿಝನ್, ಶಾನ್, ಗಗನ್ ದೀಪ್, ಆಕಾಂಕ್ಷ್, ಪ್ರತಮ್, ಇಶಾನ್, ಜೈಸನ್ ಮುಂತಾದವರು ಉತ್ತಮ ಪ್ರದರ್ಶನ ನೀಡಿದರು.
ಈ ತಂಡಕ್ಕೆ ಶಾಲಾ ದೈಹಿಕ ಶಿಕ್ಷಕರಾದ ಹರೀಶ್, ನಿರಂಜನ್ ಮತ್ತುಅಕ್ಷಯ್ ರವರು ತರಬೇತಿ ನೀಡಿದ್ದಾರೆ. ಶಾಲಾ ಶಿಕ್ಷಕಿ ಭಗಿನಿ ಸುನೀತಾ , ಮತ್ತು ಶ್ರೀಮತಿ ಫ್ಲೋರಿನ್ ಡಿಸೋಜಾರವರು ವ್ಯವಸ್ಥಾಪಕಿಯಾಗಿ ಸಹಕರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಶಾಂತಿ ಅಗ್ನೇಸ್ ಬಿ.ಎಸ್ ರವರು ತಂಡಕ್ಕೆ ಶುಭ ಹಾರೈಸಿದರು, ಭಗಿನಿ ರೀಮಾರವರು ಹಾಜರಿದ್ದರು.








