Sunday, June 29, 2025
spot_imgspot_img
spot_imgspot_img

ಹಣ್ಣು ತಿನ್ನುವಾಗ ಗಂಟಲಿನಲ್ಲಿ ಬೀಜ ಸಿಲುಕಿ ಬಾಲಕಿ ಮೃತ್ಯು

- Advertisement -
- Advertisement -

ರಂಬುಟಾನ್ ಹಣ್ಣು ತಿನ್ನುವಾಗ ಗಂಟಲಿನಲ್ಲಿ ಬೀಜ ಸಿಲುಕಿ 6 ವರ್ಷದ ಬಾಲಕಿ ಮೃತಪಟ್ಟ ಘಟನೆ ಪೆರುಂಬವೂರಿನಲ್ಲಿ ಸಂಭವಿಸಿದೆ.

ಮೃತ ಬಾಲಕಿಯನ್ನು ಕೇರಳದ ಪೆರುಂಬವೂರಿನ ಕಂಡಂತರ ಚಿರಾಯತುವೀಟ್ ನ ಮನ್ಸೂರ್ ಅವರ ಪುತ್ರಿ ನೂರ್ ಫಾತಿಮಾ (6) ಎಂದು ಗುರುತಿಸಲಾಗಿದೆ.

ಯು.ಕೆ.ಜಿ. ವಿದ್ಯಾರ್ಥಿನಿಯಾಗಿರುವ ನೂರ್ ಫಾತಿಮಾ ಭಾನುವಾರ ಸಂಜೆ ಮನೆಯಲ್ಲಿ ಇತರ ಮಕ್ಕಳೊಂದಿಗೆ ರಂಬುಟಾನ್ ತಿನ್ನುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಗಂಟಲಲ್ಲಿ ರಂಬುಟಾನ್ ಹಣ್ಣಿನ ಬೀಜ ಸಿಲುಕಿದ್ದರಿಂದ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ ಅದಾಗಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!